alex Certify
ಕನ್ನಡ ದುನಿಯಾ       Mobile App
       

Kannada Duniya

77 ಮೈಲಿ ಓಡಿದ 85ರ ಹರೆಯದ ವೃದ್ಧ…!

85 ವರ್ಷ ವಯಸ್ಸಿನ ವೃದ್ಧರೊಬ್ಬರು 24 ಗಂಟೆಗಳಲ್ಲಿ ಬರೋಬ್ಬರಿ 77 ಮೈಲಿಗಳಷ್ಟು ದೂರವನ್ನು ಓಡಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ದಕ್ಷಿಣ ಲಂಡನ್‌ನ ಹಿಂಕ್ಲಿ ರನ್ನಿಂಗ್ ಕ್ಲಬ್‌ನ ಜಿಯೋಫ್ ಒಲಿವರ್ ಎಂಬುವವರೇ ಈ ಸಾಧಕ.

ತಮ್ಮ ವಯೋಮಾನದವರಿಗಾಗಿ ಏರ್ಪಡಿಸಲಾಗಿದ್ದ ವಾರ್ಷಿಕ 24 ಗಂಟೆಗಳ ಓಟ ಸ್ಪರ್ಧೆಯಲ್ಲಿ (ಟೂಟಿಂಗ್ 24 ರೇಸ್) ಪೂರ್ತಿ 24 ಗಂಟೆಗಳ ಕಾಲ ಒಲಿವರ್ ಓಡಿದ್ದಾರೆ.

ತಮ್ಮ 50ನೇ ವಯಸ್ಸಿಗೆ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸತೊಡಗಿದ್ದ ಒಲಿವರ್ 65ನೇ ವಯಸ್ಸಿಗೆ ಮೊದಲ ವಿಶ್ವದಾಖಲೆ ಮಾಡಿದ್ದರು. 2009ರಲ್ಲಿ ನಾಲ್ಕು ರಾಷ್ಟ್ರೀಯ ಹಾಗೂ ಎರಡು ವಿಶ್ವ ದಾಖಲೆಗಳನ್ನು ಒಂದೇ ಕ್ರೀಡಾಕೂಟದಲ್ಲಿ ಮುರಿದ ಹೆಗ್ಗಳಿಕೆಯೂ ಇವರಿಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...