alex Certify
ಕನ್ನಡ ದುನಿಯಾ       Mobile App
       

Kannada Duniya

ಆಪ್ ತಯಾರಿಸಿದ್ದಾಳೆ 81 ರ ಈ ಅಜ್ಜಿ….

app

ಆಧುನಿಕ ತಂತ್ರಜ್ಞಾನ ವಯಸ್ಸಾದವರಿಗೆ ಅರ್ಥವಾಗುವುದಿಲ್ಲ ಎಂಬ ಮಾತು ಸತ್ಯಕ್ಕೆ ದೂರವಾದದ್ದು. ಈ ಸವಾಲನ್ನು ಕೂಡ ಹಿರಿ ಜೀವಗಳು ಸ್ವೀಕರಿಸಿದ್ದಾರೆ. ಜಪಾನ್ ನಲ್ಲಿ 81 ವರ್ಷದ ಅಜ್ಜಿಯೊಬ್ಬಳು ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದಾಳೆ.

ಸಾಂಪ್ರದಾಯಿಕ ಗೊಂಬೆಗಳನ್ನು ಎಲ್ಲೆಲ್ಲಿ ಕೂರಿಸಬೇಕು ಅನ್ನೋದನ್ನು ತಿಳಿಸಿಕೊಡುವ ಆಪ್ ಇದು. ‘ಹಿನಾಮತ್ಸೂರಿ’ ಎಂಬ ಪುರಾತನ ಸಂಪ್ರದಾಯವನ್ನು ಉಳಿಸಿ ಬೆಳೆಸಲು ಮಸಾಕೋ ವಕಾಮಿಯಾ ಎಂಬ ವೃದ್ಧೆ ಈ ಆಪ್ ತಯಾರಿಸಿದ್ದಾಳೆ.

ಈ ಆಪ್ ನ ಹೆಸರು ‘ಹಿನಾದಾನ್’, ಹಿನಾ ಎಂದರೆ ಗೊಂಬೆ, ಮತ್ತು ದಾನ್ ಎಂದರೆ ಶ್ರೇಣಿ ಎಂದರ್ಥ. 12 ಗೊಂಬೆಗಳನ್ನು ಈ ಆಪ್ ಮೂಲಕ ವ್ಯವಸ್ಥಿತವಾಗಿ ಜೋಡಿಸಬಹುದು. ಜಪಾನ್ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಸಾಕೋ ವಕಾಮಿಯಾ ಬ್ಲಾಗ್ ಬರೆಯುತ್ತಾಳೆ. ತಮ್ಮ ಟ್ರಾವೆಲ್ ಬಗ್ಗೆ ಬ್ಲಾಗ್ ನಲ್ಲಿ ಬರೆಯುತ್ತಾಳೆ, ಜೊತೆಗೆ ಎಕ್ಸೆಲ್ ನಲ್ಲಿ ಚಿತ್ರಕಲೆ ಬಿಡಿಸೋದು ಹೇಗೆ ಅನ್ನೋ ಟಿಪ್ಸ್ ಕೊಡ್ತಾಳೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...