alex Certify
ಕನ್ನಡ ದುನಿಯಾ       Mobile App
       

Kannada Duniya

70ರಲ್ಲೂ 35ರ ಹರೆಯದಂತೆ ಕಾಣುವ ಈ ಮಹಿಳೆ ಗುಟ್ಟು ಕೇಳಿದ್ರೆ ದಂಗಾಗ್ತೀರಾ…!

ಆಸ್ಟ್ರೇಲಿಯಾದ ಪರ್ತ್ ಕ್ಯಾರೊಲಿನ್ ಹರ್ಟ್ಜ್ ಎಲ್ಲರ ಗಮನ ಸೆಳೆದಿದ್ದಾಳೆ. ಮೂರು ಮಕ್ಕಳಿರುವ 70 ವರ್ಷದ ಹರ್ಟ್ಜ್ 35 ವರ್ಷ ವಯಸ್ಸಿನಂತೆ ಕಾಣ್ತಾಳೆ. ತನ್ನ ಸೌಂದರ್ಯಕ್ಕೆ ಕಾರಣವೇನು ಎಂಬುದ್ರ ಗುಟ್ಟನ್ನು ಕ್ಯಾರೊಲಿನ್ ಬಿಚ್ಚಿಟ್ಟಿದ್ದಾಳೆ. ಆದ್ರೆ ಕ್ಯಾರೊಲಿನ್ ಹೇಳಿದ ಗುಟ್ಟನ್ನು ನಂಬಲು ಜನರು ಸಿದ್ಧರಿಲ್ಲ. ಆಕೆ ಸುಳ್ಳು ಹೇಳ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

ಕ್ಯಾರೊಲಿನ್ ಸೌಂದರ್ಯ ಹೀಗಿರಲು ಮುಖ್ಯ ಕಾರಣ ಸಕ್ಕರೆ ತಿನ್ನದಿರುವುದಂತೆ. 41ನೇ ವಯಸ್ಸಿನಲ್ಲಿ ಕ್ಯಾರೊಲಿನ್ ಗೆ ಮಧುಮೇಹ ಖಾಯಿಲೆಯ ಲಕ್ಷಣ ಕಂಡು ಬಂದಿತ್ತಂತೆ. 29 ವರ್ಷಗಳಿಂದ ಕ್ಯಾರೊಲಿನ್ ಸಕ್ಕರೆಯಿಂದ ದೂರವಿದ್ದಾಳಂತೆ. ಇದ್ರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡ್ತಾಳಂತೆ.

ಬಾಸ್ಕೆಟ್ ಬಾಲ್ ಹವ್ಯಾಸಿಯಾಗಿರುವ ಕ್ಯಾರೊಲಿನ್ ಪ್ರತಿ ದಿನ ಕೆಲ ಸಮಯವನ್ನು ಅದಕ್ಕೆ ಮೀಸಲಿಟ್ಟಿದ್ದಾಳಂತೆ. 45 ವರ್ಷದಲ್ಲಿ ಬಾಸ್ಕೆಟ್ ಬಾಲ್ ಕಲಿತ ಕ್ಯಾರೊಲಿನ್ ಸುಖ ನಿದ್ರೆ ಮಾಡ್ತಾಳಂತೆ. ಇದೆಲ್ಲವೂ ತನ್ನ ಸೌಂದರ್ಯದ ಗುಟ್ಟು ಎಂದಿದ್ದಾಳೆ.

ಸಿಹಿ ತಿಂಡಿ ತಯಾರಿಸುವ ಕಂಪನಿಯೊಂದನ್ನು ಕ್ಯಾರೊಲಿನ್ ನಡೆಸ್ತಿದ್ದಾಳೆ. ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕ. ಕ್ಸಿಲಿಟಾಲ್ ಬಳಸಿ ಸಿಹಿ ತಿಂಡಿ ತಯಾರು ಮಾಡುತ್ತದೆ ನಮ್ಮ ಕಂಪನಿ ಎಂದು ಕ್ಯಾರೊಲಿನ್ ಹೇಳಿದ್ದಾಳೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕ್ಯಾರೊಲಿನ್ ತನ್ನ ಕಂಪನಿ ಪ್ರಚಾರಕ್ಕಾಗಿ ಹೀಗೆಲ್ಲ ನಾಟಕವಾಡ್ತಿದ್ದಾಳೆಂದು ಜನ ಆಡಿಕೊಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...