alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಂಗ್ಲಾದಲ್ಲಿ ಸಿಕ್ಕ ವಿಷ್ಣು ಮೂರ್ತಿ ಬೆಲೆ ಕೇಳಿದ್ರೆ ದಂಗಾಗ್ತಿರಾ

ಉತ್ತರ ಬಾಂಗ್ಲಾದೇಶದಲ್ಲಿ ಹಿಂದೂ ದೇವರು ವಿಷ್ಣು ಮೂರ್ತಿಯೊಂದು ಸಿಕ್ಕಿದೆ. 70 ಕಿಲೋಗ್ರಾಮ್ ತೂಕದ ವಿಷ್ಣು ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಧಾನಿ ಢಾಕಾದಿಂದ 203 ಕಿಲೋಮೀಟರ್ ದೂರದಲ್ಲಿರುವ ಗ್ರಾಮದಲ್ಲಿ ಈ ಮೂರ್ತಿ ಸಿಕ್ಕಿದೆ.

ನಟೋರೆ ಜಿಲ್ಲೆಯ ಪಶ್ಚಿಮ ಹಾಗುರಿಯಾ ಗ್ರಾಮವೊಂದರ ಮನೆಯಲ್ಲಿದ್ದ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಪ್ತ ಮಾಹಿತಿ ಮೇರೆಗೆ ಸ್ಥಳೀಯ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ್ದರು. ಭಾನುವಾರ ತಡರಾತ್ರಿ ಈ ದಾಳಿ ನಡೆದಿದೆ. ದಾಳಿ ವೇಳೆ 70 ಕಿಲೋಗ್ರಾಮ್ ತೂಕದ ವಿಷ್ಣು ಮೂರ್ತಿ ಸಿಕ್ಕಿದೆ. ಈ ಮೂರ್ತಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ ಎಂದು ಮೂಲಗಳು ಹೇಳಿವೆ. ಮೂರ್ತಿಯನ್ನು ಖಜಾನೆಯಲ್ಲಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದಾರೆ. ಮನೆಯವರ ಬಳಿ ಇಷ್ಟು ದೊಡ್ಡ ಮೊತ್ತದ ಮೂರ್ತಿ ಎಲ್ಲಿಂದ ಬಂತು ಎಂಬುದು ತನಿಖೆ ನಂತ್ರ ಹೊರಬರಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...