alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಗೆ ಬೆರಳು ತೋರಿಸಿದ ಮಹಿಳೆಗೆ ನೆರವಿನ ಮಹಾಪೂರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ಬೆಂಗಾವಲು ವಾಹನಕ್ಕೆ ಸೈಕಲ್ ನಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬಳು ಮಧ್ಯ ಬೆರಳು ತೋರಿಸಿ ಅವಮಾನಿಸಿದ್ದಳು. ಈ ತಪ್ಪಿಗೆ 50 ವರ್ಷದ ಸೈಕ್ಲಿಸ್ಟ್ ಜೂಲಿ ಬ್ರಿಕ್ಸ್ ಮ್ಯಾನ್ ಭಾರೀ ಬೆಲೆ ತೆರಬೇಕಾಗಿ ಬಂದಿತ್ತು. ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ಇದರ ಬೆನ್ನಲ್ಲೇ ಜೂಲಿಗೆ ನೆರವಿನ ಮಹಾಪೂರ ಹರಿದು ಬಂದಿದೆ. ಕ್ರೌಡ್ ಫಂಡಿಂಗ್ ಗಾಗಿ ಸರ್ಕಾರಿ ಕಾಂಟ್ರಾಕ್ಟರ್ ಅಕಿಮಾ ಎಲ್ ಸಿ ಸಿ ಪೇಜ್ ಒಂದನ್ನು ಆರಂಭಿಸಿದ್ದಾರೆ. ಇಬ್ಬರು ಮಕ್ಕಳ ತಾಯಿ ಜೂಲಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಪೇಜ್ ಆರಂಭಿಸಿ ಕೇವಲ 7 ದಿನಗಳಲ್ಲೇ 70,000 ಡಾಲರ್ ಹಣ ಸಂಗ್ರಹವಾಗಿದೆ.

ಸುಮಾರು 3000 ಮಂದಿ ಈಗಾಗ್ಲೇ ಹಣ ದಾನ ಮಾಡಿದ್ದಾರೆ. 100000 ಡಾಲರ್ ಹಣ ಸಂಗ್ರಹವಾಗುವ ನಿರೀಕ್ಷೆ ಇದೆ. ಟ್ರಂಪ್ ವಾಹನವನ್ನು ನೋಡಿದ್ದೇ ತಡ ನನ್ನ ರಕ್ತ ಕುದಿಯಲಾರಂಭಿಸಿತ್ತು. ಹಾಗಾಗಿ ಕೋಪದಲ್ಲಿ ಬೆರಳು ತೋರಿಸಿದೆ ಅಂತಾ ಜೂಲಿ ಹೇಳಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...