alex Certify
ಕನ್ನಡ ದುನಿಯಾ       Mobile App
       

Kannada Duniya

7 ವರ್ಷಗಳ ಹಿಂದೆ ಯುವತಿ ಹೇಳಿದ್ದನ್ನು ನೆನಪಿಸಿದ್ದಾನೆ ಈತ

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಜನ ಎಲ್ಲವನ್ನೂ ಶೇರ್ ಮಾಡಿಕೊಳ್ತಾರೆ. ತಮ್ಮ ನೋವು, ನಲಿವು, ದಿನನಿತ್ಯದ ಆಗು ಹೋಗುಗಳ ಬಗ್ಗೆ ಟ್ವೀಟ್ ಮಾಡ್ತಾರೆ. ಯುವತಿಯೊಬ್ಬಳು 2011ರಲ್ಲಿ ಟ್ವೀಟ್ ಮಾಡಿದ್ಲು.

ಸಮಾಜ ಸೇವೆ ಮಾಡಬೇಕು ಅಂತಾ ಆಕೆ ಪಣ ತೊಟ್ಟಿದ್ದಳಂತೆ. ಅಷ್ಟೇ ಅಲ್ಲ ಜನಸಂಖ್ಯಾ ಹೆಚ್ಚಳದ ಬಗ್ಗೆ ಜಾಗೃತಿ ಮೂಡಿಸಬೇಕು ಅನ್ನೋದು ಅವಳ ಉದ್ದೇಶವಾಗಿತ್ತು. ಹಾಗಾಗಿ ತಾನು ಯಾವುದೇ ಕಾರಣಕ್ಕೂ ಮಗು ಮಾಡಿಕೊಳ್ಳಬಾರದೆಂದು ನಿರ್ಧರಿಸಿಬಿಟ್ಟಿದ್ಲು.

7 ವರ್ಷಗಳಲ್ಲಿ ಯಾವುದೇ ಕಾರಣಕ್ಕೂ ಮಕ್ಕಳನ್ನು ಹೊಂದದಂತೆ ನನಗೆ ನೆನಪಿಸಿ ಅಂತಾ ಟ್ವೀಟ್ ಮಾಡಿದ್ದಳು. ಆಕೆ ಟ್ವೀಟ್ ಮಾಡಿ 7 ವರ್ಷಗಳು ಕಳೆದಿವೆ. ಈಗ ಡೌಗ್ ಎಕ್ಸೆಟರ್ ಎಂಬಾತ ಆಕೆಗೆ ಮಕ್ಕಳನ್ನು ಹೊಂದದಂತೆ ನೆನಪಿಸಿದ್ದಾರೆ.

ಡೌಗ್ ಟ್ವೀಟ್ ಮಾಡಿದ್ದು ಸ್ವಲ್ಪ ತಡವಾಯಿತು ಎನ್ನುತ್ತಿದ್ದಾಳೆ ಆ ಮಹಿಳೆ. ಯಾಕಂದ್ರೆ ಅವಳ ಮಗಳಿಗೆ ಈಗ ಒಂದು ವರ್ಷ ತುಂಬಿದೆಯಂತೆ. ಹಾಗಾಗಿ 7 ವರ್ಷದ ಬದಲು 5 ವರ್ಷದ ಗಡುವು ಕೊಟ್ಟಿದ್ದರೆ ಸರಿಯಾಗುತ್ತಿತ್ತು ಅಂತಾ ಡೌಗ್ ತಮಾಷೆ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...