alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ಸ್ಪರ್ಧೆ ವಿಜೇತೆಯಾದ 7 ವರ್ಷದ ಬಾಲಕಿಗೆ ಸಿಗ್ತಿದೆ 20 ಲಕ್ಷ ರೂ.

ಅಮೆರಿಕಾದ ಸಣ್ಣ ಬಾಲಕಿಯೊಬ್ಬಳು ಸ್ಟಾರ್ ಆಗಿ ಹೊರಹೊಮ್ಮಿದ್ದಾಳೆ. ವಿಶ್ವದ ಜನರಿಗೆ ಆಯೋಜನೆ ಮಾಡಲಾಗಿದ್ದ ಡೂಡಲ್ 4 ಗೂಗಲ್ ಸ್ಪರ್ಧೆಯಲ್ಲಿ ವಿಜೇತಳಾಗಿದ್ದಾಳೆ. ವರ್ಜೀನಿಯಾ ಫಾಲ್ಸ್ ಚರ್ಚ್ ನಿವಾಸಿ ಏಳು ವರ್ಷದ ಸಾರಾ ಗೊಮೆಜ್ ಈ ಸಾಧನೆ ಮಾಡಿದ್ದಾಳೆ.

ವಿಶ್ವದಾದ್ಯಂತ ಏರ್ಪಡಿಸಿದ್ದ ಈ ಸ್ಪರ್ಧೆಯಲ್ಲಿ ಅನೇಕರು ಪಾಲ್ಗೊಂಡಿದ್ದರು. ಈ ಬಾರಿ ವಾಟ್ ಇನ್ಸ್ಪಾಯರ್ ಮಿ ಥೀಮ್ ನೀಡಲಾಗಿತ್ತು. ಅನೇಕ ತಿಂಗಳ ನಂತ್ರ ಮೊದಲನೇ ಕ್ಲಾಸ್ ನಲ್ಲಿ ಓದುತ್ತಿರುವ ಸಾರಾ ವಿಜೇತೆಯಾಗಿ ಹೊರಹೊಮ್ಮಿದ್ದಾಳೆ. ಸಾರಾ ಡೈನೋಸರ್ ಬಿಡಿಸಿದ್ದಳು. ಈ ಸ್ಪರ್ಧೆಯ ವಿಜೇತೆಯಾಗಿರುವ ಸಾರಾಗೆ 30 ಸಾವಿರ ಡಾಲರ್ (20.46 ಲಕ್ಷ ರೂಪಾಯಿ) ಬಹುಮಾನ ಸಿಗಲಿದೆ.

ಗೂಗಲ್ ಈ ಸ್ಪರ್ಧೆಗಾಗಿ ಮೂರು ಮಾನದಂಡಗಳನ್ನು ಬಳಸಿತ್ತು. ಕಲಾತ್ಮಕ ಕೌಶಲ್ಯ, ಸೃಜನಶೀಲತೆ ಜೊತೆಗೆ ಸ್ಪರ್ಧಿಗಳು ಥೀಮನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಗಮನಿಸಲಾಗಿತ್ತು. ಸಾರಾ ವರ್ಣಚಿತ್ರವನ್ನು ಕಂಪನಿ ಹೆಚ್ಚು ಇಷ್ಟಪಟ್ಟಿದೆಯಂತೆ. ಡೈನೋಸರ್ ಸಹಾಯದಿಂದ ಗೂಗಲ್ ಲೋಗೋ ತಯಾರಿಸಿರುವ ಸಾರಾ ಸಾಧನೆ ಮೆಚ್ಚುವಂತಹದ್ದು ಎಂದು ಗೂಗಲ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...