alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕರಗಿಸುತ್ತೆ ಈ ಪುಟ್ಟ ಬಾಲಕಿಯ ಕಥೆ

dead-sleepಅಮೆರಿಕದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇದು. ಆಕೆ ಇನ್ನು 7 ವರ್ಷದ ಪುಟ್ಟ ಬಾಲಕಿ. ಕಳೆದ ಒಂದು ದಿನದಿಂದ ಮನೆಯಲ್ಲಿ ಮಲಗಿದ್ದ ತನ್ನ ತಂದೆ- ತಾಯಿಯನ್ನು ಎಬ್ಬಿಸಲು ಪ್ರಯತ್ನಪಡುತ್ತಲೇ ಇದ್ಲು.

ಸೋಮವಾರ ಎಂದಿನಂತೆ ಯೂನಿಫಾರ್ಮ್ ಧರಿಸಿ ಪಿಟ್ಸ್ ಬರ್ಗ್ ಅಪಾರ್ಟ್ ಮೆಂಟ್ ಹೊರಗಿರುವ ಶಾಲೆಗೆ ಹೋಗಿದ್ದಾಳೆ. ತನ್ನ ದುಗುಡವನ್ನು ಶಾಲೆಯಲ್ಲಿ ಯಾರ ಬಳಿಯೂ ಹೇಳಿರಲಿಲ್ಲ. ಆದ್ರೆ ವ್ಯಾನ್ ಚಾಲಕನ ಬಳಿ ಎಷ್ಟು ಎಬ್ಬಿಸಿದ್ರೂ ತನ್ನ ಪೋಷಕರು ಮೇಲಕ್ಕೇಳುತ್ತಿಲ್ಲ ಅಂತಾ ಹೇಳಿದ್ದಳು. ಚಾಲಕ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮನೆಗೆ ಬಂದು ನೋಡಿದಾಗ ಬಾಲಕಿಯ ಪೋಷಕರಿಬ್ರೂ ಏಳುವ ಸ್ಥಿತಿಯಲ್ಲೇ ಇರಲಿಲ್ಲ, ಯಾಕಂದ್ರೆ ಅವರು ಚಿರನಿದ್ರೆಗೆ ಜಾರಿದ್ದರು.

ಡ್ರಗ್ಸ್ ದಾಸರಾಗಿದ್ದ 26 ವರ್ಷದ ಕ್ರಿಸ್ಟೋಫರ್ ಹಾಗೂ 25 ವರ್ಷದ ಜೆಸ್ಸಿಕಾ ಅದೇ ಚಟಕ್ಕೆ ಬಲಿಯಾಗಿದ್ದರು. ಡ್ರಗ್ಸ್ ಓವರ್ ಡೋಸ್ ನಿಂದ ಮಲಗಿದಲ್ಲೇ ಹೆಣವಾಗಿ ಹೋಗಿದ್ರು. ಆದ್ರೆ ಮನೆಯಲ್ಲಿದ್ದ ನಾಲ್ವರು ಮಕ್ಕಳಿಗೂ ತಮ್ಮ ತಂದೆ- ತಾಯಿ ಬದುಕಿಲ್ಲ ಅನ್ನೋದು ಅರಿವಿರಲಿಲ್ಲ. ಏಳು ವರ್ಷದ ಬಾಲಕಿಯ ಜೊತೆಗೆ ಇನ್ನು 5 ವರ್ಷ, 3 ವರ್ಷ ಮತ್ತು 9 ತಿಂಗಳ ಹಸುಗೂಸು ಕೂಡ ಇತ್ತು. ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...