alex Certify
ಕನ್ನಡ ದುನಿಯಾ       Mobile App
       

Kannada Duniya

7 ವರ್ಷದ ಈ ಯೋಗ ಶಿಕ್ಷಕ ಪ್ರತಿ ತಿಂಗಳು ಗಳಿಸ್ತಿದ್ದಾನೆ 10 ಲಕ್ಷ

ಚೀನಾದಲ್ಲಿ 7 ವರ್ಷದ ಚಿಕ್ಕ ಬಾಲಕ ಯೋಗ ಶಿಕ್ಷಕನಾಗಿದ್ದಾನೆ. ಈತ ಪ್ರತಿ ತಿಂಗಳು ಸುಮಾರು 16,000 ಡಾಲರ್ (10.90 ಲಕ್ಷ ರೂ.) ಗಳಿಸುತ್ತಿದ್ದಾನೆ. ಈ ಕಾರಣಕ್ಕೆ ಚೀನಾದ ಅತ್ಯಂತ ಚಿಕ್ಕ ವಯಸ್ಸಿನ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಚೀನಾ ಮಾಧ್ಯಮಗಳ ವರದಿ ಪ್ರಕಾರ ಬಾಲಕ ಪ್ರಾಚೀನ ಭಾರತೀಯ ಯೋಗವನ್ನು ಜನರಿಗೆ ಕಲಿಸುತ್ತಿದ್ದಾನಂತೆ.ಈತನ ಹೆಸ್ರು ಸುನ್ ಚುಯಾಂಗ್. ಇಂಗ್ಲೀಷ್ ಹೆಸ್ರು ಮೈಕ್. ಚೀನಾದಲ್ಲಿ ಈಗ ಪ್ರಸಿದ್ಧಿ ಪಡೆದಿದ್ದಾನೆ. ಚೀನಾವೊಂದೇ ಅಲ್ಲ ಮೈಕ್ ವಿಶ್ವದ ಅತ್ಯಂತ ಕಿರಿಯ ಯೋಗ ಶಿಕ್ಷಕನಾಗಿದ್ದಾನೆ.

ಮೈಕ್ 2 ವರ್ಷದವನಿದ್ದಾಗ ಆಟಿಸಂಗೆ ತುತ್ತಾಗಿದ್ದನಂತೆ. ಆತನನ್ನು ಡೇ ಕೇರ್ ಸೆಂಟರ್ ಗೆ ಸೇರಿಸಲಾಯ್ತು. ರೋಗ ತಡೆಗಟ್ಟಲು ತಾಯಿ ಯೋಗ ಕ್ಲಾಸಿಗೆ ಸೇರಿಸಿದ್ದರು. ಕೇವಲ ಒಂದು ವರ್ಷದಲ್ಲೇ ಯೋಗವನ್ನು ಚೆನ್ನಾಗಿ ಕಲಿತಿದ್ದ. ಎರಡು ವರ್ಷದಲ್ಲೇ ಆಟಿಸಂನಿಂದ ಹೊರ ಬಂದ ಮೈಕ್ ಯೋಗದಲ್ಲಿ ಪ್ರತಿಭೆ ತೋರಿಸಲು ಶುರು ಮಾಡಿದ್ದ.

ಕೆಲ ನಿರ್ದಿಷ್ಟ ಯೋಗ ಭಂಗಿಯಿಂದ ಆಟಿಸಂ ಕಡಿಮೆ ಮಾಡಬಹುದೆಂದು ಸಂಶೋಧಕರು ಹೇಳಿದ್ದಾರೆ. ಯೋಗದ ಮೂಲಕ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಯಾಗುತ್ತದೆ. ಆರು ವರ್ಷದಲ್ಲಿಯೇ ಮೈಕ್ ಸುದ್ದಿ ಮಾಡಲು ಶುರು ಮಾಡಿದ್ದ. ನಿಧಾನವಾಗಿ ಆತ ಪ್ರಸಿದ್ಧನಾದ. ಸ್ಥಳೀಯ ಯೋಗ ಕೇಂದ್ರಗಳು ಆತನನ್ನು ಶಿಕ್ಷಕನಾಗಿ ನೇಮಿಸಿಕೊಳ್ಳಲು ತುದಿಕಾಲಿನಲ್ಲಿ ನಿಂತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...