alex Certify
ಕನ್ನಡ ದುನಿಯಾ       Mobile App
       

Kannada Duniya

ಆಫ್ರಿಕಾದ ಕಿಲಿಮಾಂಜರೋ ಶಿಖರ ಏರಿದ ಹೈದ್ರಾಬಾದ್ ಪೋರ

ಹೈದ್ರಾಬಾದ್ ನ 7 ವರ್ಷದ ಬಾಲಕನೊಬ್ಬ ಆಫ್ರಿಕಾದ ಕಿಲಿಮಾಂಜರೋ ಶಿಖರ ಏರಿದ್ದಾನೆ. ಇದು ತಾಂಜೇನಿಯಾದ ಉಹುರು ಎಂಬಲ್ಲಿದೆ. ಏಪ್ರಿಲ್ 2ರಂದು ಬಾಲಕ ಸಮನ್ಯು ಪೋತುರಾಜು ಮತ್ತವನ ತರಬೇತುದಾರರು ಈ ಸಾಹಸ ಮಾಡಿದ್ದಾರೆ.

ಸಮುದ್ರ ಮಟ್ಟದಿಂದ 5895 ಮೀಟರ್ ಎತ್ತರದಲ್ಲಿರುವ ಶಿಖರ ತಲುಪಿದ ಇವರು, ಅಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ರು. ಆ ದಿನ ಅಲ್ಲಿ ಮಳೆಯಾಗುತ್ತಿತ್ತು, ಶಿಖರ ಸಂಪೂರ್ಣ ಕಲ್ಲುಗಳಿಂದ ತುಂಬಿತ್ತು. ಆದ್ರೆ ಧೈರ್ಯಗೆಡದೇ ಸಮನ್ಯು ಈ ಸಾಧನೆ ಮಾಡಿದ್ದಾನೆ.

ಮುಂದಿನ ತಿಂಗಳು ಆಸ್ಟ್ರೇಲಿಯಾದ ಪರ್ವತ ಏರುವ ಮೂಲಕ ಮತ್ತೊಂದು ದಾಖಲೆ ಮಾಡುವ ಹಂಬಲದಲ್ಲಿದ್ದಾನೆ ಸಮನ್ಯು. ತಾಯಿ ಲಾವಣ್ಯ, ಕೋಚ್ ತಮ್ಮಿನೇನಿ ಭರತ್, ಪರ್ವತಾರೋಹಿ ಶೃಂಗಬಂಧಿ ಸೃಜನಾ ಹಾಗೂ ತಾಂಜೇನಿಯಾದ ಸ್ಥಳೀಯ ವೈದ್ಯರೊಬ್ಬರು ಸಮನ್ಯು ಜೊತೆಗೆ ಶಿಖರ ಏರಿದ್ದರು. ಮಾರ್ಚ್ 29ರಂದು ಹೊರಟಿದ್ದ ಇವರು 5 ದಿನಗಳ ಬಳಿಕ ಪರ್ವತದ ತುತ್ತತುದಿ ತಲುಪಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...