alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ಸಿಇಓ ಗೆ ಪತ್ರ ಬರೆದಿದ್ದಾಳೆ 7 ವರ್ಷದ ಬಾಲಕಿ

chloe-bridgewaterತನ್ನ ತಂದೆ ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ಗೂಗಲ್ ಕುರಿತು ಹೇಳುತ್ತಿದ್ದುದ್ದನ್ನೇ ತನ್ನ ತಲೆಯಲ್ಲಿ ತುಂಬಿಕೊಂಡಿದ್ದ ಪುಟ್ಟ ಪೋರಿಯೊಬ್ಬಳು ಕೆಲಸ ಕೋರಿ ಗೂಗಲ್ ಸಿಇಓ ಸುಂದರ್ ಪಿಚೈಯವರಿಗೆ ಪತ್ರ ಬರೆದು ಮಾರುತ್ತರ ಪಡೆಯುವಲ್ಲೂ ಸಫಲಳಾಗಿದ್ದಾಳೆ.

ಯುನೈಟೆಡ್ ಕಿಂಗ್ಡಂ ನಿವಾಸಿ 7 ವರ್ಷದ ಬಾಲಕಿ Chloe Bridgewater ಗೆ ಚಿಕ್ಕಂದಿನಿಂದಲೂ ಕಂಪ್ಯೂಟರ್ ಕುರಿತು ಆಪಾರ ಕುತೂಹಲ. ಇತ್ತೀಚೆಗೆ ತನ್ನ ತಂದೆ ಟ್ಯಾಬ್ಲೆಟ್ ತಂದುಕೊಟ್ಟ ವೇಳೆ ಕುತೂಹಲದಿಂದ ಹಲವು ಪ್ರಶ್ನೆಗಳನ್ನು ಕೇಳಿದ್ದಾಳೆ.

ಆಗ ಆಕೆಯ ತಂದೆ, ವಿದ್ಯಾಭ್ಯಾಸ ಮುಗಿದ ಮೇಲೆ ಗೂಗಲ್ ನಲ್ಲಿ ಕೆಲಸ ಮಾಡಲಾರಂಭಿಸಿದರೆ ಈ ಎಲ್ಲದರ ಕುರಿತು ಅರಿವಾಗುತ್ತದೆ ಎಂದಿದ್ದಾರೆ. ತಡ ಮಾಡದ ಬಾಲಕಿ ಗೂಗಲ್ ಸಿಇಓಗೆ ಪತ್ರ ಬರೆದು ತನಗೆ ಮುಂದೆ ಕೆಲಸ ನೀಡುವಂತೆ ಕೋರಿದ್ದಾಳೆ. ಅಲ್ಲದೆ ಪತ್ರದಲ್ಲಿ ತನ್ನ ಹಲವು ಕನಸುಗಳನ್ನೂ ಬಿಚ್ಚಿಟ್ಟಿದ್ದಾಳೆ.girl-letter-to-google-ceo

ಪತ್ರ ಗೂಗಲ್ ಸಿಇಓ ಸುಂದರ್ ಪಿಚೈಯವರಿಗೆ ತಲುಪಿದ್ದು, ಅವರು ಅದಕ್ಕೆ ಉತ್ತರ ಕೂಡಾ ನೀಡಿದ್ದಾರೆ. ಖಂಡಿತ ನಿನಗೆ ಕೆಲಸ ನೀಡೋಣಾ ಎಂದಿರುವ ಸುಂದರ್ ಪಿಚೈ, ನಿನ್ನ ಕನಸುಗಳೆಲ್ಲಾ ಸಾಕಾರಗೊಳ್ಳಲಿ ಎಂದು ಹಾರೈಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...