alex Certify
ಕನ್ನಡ ದುನಿಯಾ       Mobile App
       

Kannada Duniya

68 ನೇ ವಯಸ್ಸಿನಲ್ಲಿ ವಿಚ್ಛೇದನ ಕೇಸ್ ಸೋತ ಮಹಿಳೆ

ಬ್ರಿಟನ್ ನಲ್ಲಿ 68 ವರ್ಷದ ಮಹಿಳೆ ವಿಚ್ಛೇದನ ಪ್ರಕರಣದಲ್ಲಿ ಹಿನ್ನೆಡೆ ಅನುಭವಿಸಿದ್ದಾಳೆ. 2012 ರಲ್ಲಿಯೇ ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಟಿನಿ ಓವೆನ್ಸ್ ಹೆಸರಿನ ಮಹಿಳೆ 40 ವರ್ಷಗಳ ಹಿಂದೆ 1978 ರಲ್ಲಿ ಮದುವೆಯಾಗಿದ್ದಳು. ಆಗ ಆಕೆ ವಯಸ್ಸು 28 ವರ್ಷವಾಗಿತ್ತು. ಪತಿ ಹಗ್ ಓವೆನ್ಸ್ ವಯಸ್ಸು 40 ವರ್ಷವಾಗಿತ್ತು.

ಹಗ್ ವರ್ತನೆ ಸರಿಯಿಲ್ಲ. ಆತನ ಜೊತೆ ಬದುಕುವುದು ಕಷ್ಟವೆಂದು ಟಿನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಟಿನಿ ನನ್ನ ಜೊತೆಗಿದ್ದು ಬೋರ್ ಆಗಿದ್ದಾಳೆಂದು ಹಗ್ ಹೇಳಿಕೆ ನೀಡಿದ್ದರು ವಿಚ್ಛೇದನ ನೀಡಲು ಮನಸ್ಸು ಮಾಡಿರಲಿಲ್ಲ. ಮೂರು ವರ್ಷಗಳ ಹಿಂದೆ ಅಂದ್ರೆ 2015 ರ ವರೆಗೂ ಟಿನಿ ಹಾಗೂ ಹಗ್ ಒಟ್ಟಿಗೆ ವಾಸವಾಗಿದ್ದರು.

ವಿಚ್ಛೇದನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇನ್ನೂ ಎರಡು ವರ್ಷ ಕಾಯುವಂತೆ ದಂಪತಿಗೆ ಹೇಳಿದೆ. ಅಲ್ಲಿನ ಕಾನೂನಿನ ಪ್ರಕಾರ ಐದು ವರ್ಷ ದೂರವಿರುವ ದಂಪತಿ ಮಾತ್ರ ವಿಚ್ಛೇದನ ಪಡೆಯಲು ಸಾಧ್ಯ. ಹಾಗಾಗಿ 2020 ರವರೆಗೆ ದಂಪತಿ ವಿಚ್ಛೇದನಕ್ಕೆ ಕಾಯಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...