alex Certify
ಕನ್ನಡ ದುನಿಯಾ       Mobile App
       

Kannada Duniya

12 ವರ್ಷದ ಬಾಲಕಿಗೆ 65 ರ ವೃದ್ಧ ವರ !

child-marriage

ಬಾಲ್ಯ ವಿವಾಹವನ್ನು ತಡೆಗಟ್ಟಬೇಕೆಂದು ಎಷ್ಟೆಲ್ಲಾ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ವಿಶ್ವದ ಎಲ್ಲಾ ಕಡೆಗಳಲ್ಲಿ ಆಗಾಗ ಬಾಲ್ಯ ವಿವಾಹ ನಡೆದ ಬಗ್ಗೆ ವರದಿಯಾಗುತ್ತದೆ. ವರದಿಯಾದ ಪ್ರಕರಣಕ್ಕಿಂತ ಹೆಚ್ಚಿನ ಬಾಲ್ಯ ವಿವಾಹಗಳು ನಡೆಯುತ್ತವೆ ಎಂಬುದಂತೂ ನಿಜ.

ಬಾಲ್ಯ ವಿವಾಹ ಕುರಿತ ಒಂದು ಮಾಹಿತಿ ಇಲ್ಲಿದೆ ನೋಡಿ. ನ್ಯೂಯಾರ್ಕ್ ಟೈಮ್ ಸ್ಕ್ವೇರ್ ಬಳಿ 65 ವರ್ಷದ ವೃದ್ಧನೊಬ್ಬ 12 ವರ್ಷದ ಬಾಲಕಿಯೊಂದಿಗೆ ಮಧುಮಗ, ಮಧುಮಗಳ ಗೆಟಪ್ ನಲ್ಲಿ ನಿಂತಿದ್ದರು. ಛಾಯಾಗ್ರಾಹಕನೊಬ್ಬ ಅವರಿಬ್ಬರ ಫೋಟೋ ತೆಗೆಯುತ್ತಿದ್ದ. ಅವರಿಬ್ಬರೂ ಫೋಟೋಗೆ ಫೋಸ್ ಕೊಡುವುದನ್ನು ಕಂಡವರು, ಬಾಲಕಿ ಜೊತೆ ಮುದುಕನ ಮದುವೆ ಎಂದೆಲ್ಲಾ ಮಾತಾಡಿಕೊಂಡಿದ್ದಾರೆ. ಅಲ್ಲದೇ, ಬಾಲಕಿಗೆ ನಿಮ್ಮ ಪೋಷಕರೆಲ್ಲಿ ಎಂದು ಪ್ರಶ್ನಿಸಿದ್ದಾರೆ. ಸಣ್ಣ ವಯಸ್ಸಿನ ಬಾಲಕಿಯನ್ನು ಮದುವೆ ಮಾಡಿದ್ದು ಸರಿಯಲ್ಲ ಎಂದಿದ್ದಾರೆ.

ಅಂದ ಹಾಗೇ ಬಾಲ್ಯ ವಿವಾಹ ಸಾಮಾಜಿಕ ಪಿಡುಗಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಯುಟ್ಯೂಬ್ ನ ಕಾಬಿ ಪರ್ಸಿನ್ ಅವರು ವಿಡಿಯೋ ಮಾಡಿದ್ದಾರೆ. ಅದನ್ನು ಪ್ರಚುರಪಡಿಸಲು ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರೆನ್ನಲಾಗಿದೆ. ವಿಶ್ವದಲ್ಲಿ ಸುಮಾರು 33 ಸಾವಿರ ಹೆಣ್ಣುಮಕ್ಕಳು ಒತ್ತಾಯವಾಗಿ ಮದುವೆಯಾಗಲಿದ್ದು, ಅದರಿಂದ ಆಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಾಗೃತಿಯಲ್ಲಿ ಬಾಲ್ಯ ವಿವಾಹ ಕುರಿತಂತೆ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...