alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಿದ್ದ ಜೋಡಿ ಹಿಂದಿತ್ತು ಬೃಹತ್ ಮೊಸಳೆ

croc-3_650ಯುವ ಜೋಡಿಯೊಂದು ರಾತ್ರಿ ವೇಳೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಿದ್ದ ವೇಳೆ ಅಚಾನಕ್ ಆಗಿ ನಡೆದ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂತದೊಂದು ಘಟನೆ ಜಿಂಬಾಬ್ವೆಯಲ್ಲಿ ನಡೆದಿದ್ದು, ಅಲ್ಲಿನ ಹೋಟೆಲ್ ಒಂದರಲ್ಲಿ ತಂಗಿದ್ದ ಈ ಜೋಡಿ, ರಾತ್ರಿ ವೇಳೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಿದ್ದಾಗ ಸದ್ದಿಲ್ಲದಂತೆ ಹಿಂಬದಿಯಿಂದ ಆರು ಅಡಿ ಉದ್ದದ ಬೃಹತ್ ಗಾತ್ರದ ಮೊಸಳೆಯೊಂದು ಬಂದಿದೆ.

ಇದನ್ನು ನೋಡುತ್ತಲೇ ಪುರುಷ ಕೂಡಲೇ ದಡ ಹತ್ತಿದ್ದು, ಮಹಿಳೆಯ ಕಾಲಿಗೆ ಬಾಯಿ ಹಾಕಲು ಮೊಸಳೆ ಮುನ್ನುಗಿದೆ. ಆಕೆಯೂ ತಡ ಮಾಡದೆ ದಡ ಹತ್ತಿ ತಪ್ಪಿಸಿಕೊಂಡಿದ್ದಾಳೆ. ಈ ದೃಶ್ಯಾವಳಿ ಹೋಟೆಲ್ ನಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...