alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾ ಅಧಿಕಾರಿಗಳ ವಶದಲ್ಲಿದ್ದ ಭಾರತೀಯನ ಸಾವು

ice-reuters-650_65ಅಕ್ರಮವಾಗಿ ದೇಶ ಪ್ರವೇಶಿಸಿದ ಆರೋಪದ ಮೇಲೆ ಅಮೆರಿಕಾ ವಲಸೆ ವಿಭಾಗದ ಅಧಿಕಾರಿಗಳ ವಶದಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

58 ವರ್ಷದ ಅತುಲ್ ಕುಮಾರ್ ಬಾಬುಭಾಯ್ ಪಟೇಲ್ ಸಾವನ್ನಪ್ಪಿದವರಾಗಿದ್ದು, ಕಳೆದ ವಾರ ಇವರು ಈಕ್ವೆಡಾರ್ ನಿಂದ ಅಟ್ಲಾಂಟಾಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅತುಲ್ ಕುಮಾರ್ ಅವರ ಬಳಿ ಅಧಿಕೃತ ದಾಖಲಾತಿ ಪತ್ರಗಳಿಲ್ಲದಿರುವುದು ಕಂಡು ಬಂದಿತ್ತು.

ಈ ಹಿನ್ನಲೆಯಲ್ಲಿ ಅತುಲ್ ಕುಮಾರ್ ರನ್ನು ವಶಕ್ಕೆ ಪಡೆದಿದ್ದ ವಲಸೆ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಅತುಲ್ ಕುಮಾರ್ ರನ್ನು ವಶಕ್ಕೆ ಪಡೆಯುವ ಮುನ್ನ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅವರಿಗೆ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಇರುವುದು ಕಂಡು ಬಂದಿತ್ತು.

ಶನಿವಾರದಂದು ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಲಸೆ ವಿಭಾಗದ ಅಧಿಕಾರಿಗಳು, ಇದೊಂದು ದುರದೃಷ್ಟಕರ ಘಟನೆ. ನಮ್ಮ ಕಸ್ಟಡಿಯಲ್ಲಿದ್ದಾಗ ಅವರ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಆದರೆ ಅವರು ಹೃದಯಸ್ಥಂಭನದಿಂದ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...