alex Certify
ಕನ್ನಡ ದುನಿಯಾ       Mobile App
       

Kannada Duniya

5,300 ವರ್ಷಗಳ ಹಿಂದೆ ಈತ ಏನು ತಿಂದಿದ್ದನೆಂಬುದು ಈಗ ಬಹಿರಂಗವಾಗಿದೆ…!

ಸಂಶೋಧಕರು ಇತಿಹಾಸದ ಮಾಹಿತಿ ಅರಿಯಲು ಸಂಶೋಧನೆಗಳನ್ನು ನಡೆಸುತ್ತಲೇ ಇರುತ್ತಾರೆ. ಈಗ ಅಂತಹುದೇ ಒಂದು ಸಂಶೋಧನೆಯಲ್ಲಿ 5,300 ವರ್ಷಗಳ ಹಿಂದೆ ಹಿಮದ ರಾಶಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬ, ಸಾಯುವ ಮುನ್ನ ಏನು ತಿಂದಿದ್ದನೆಂಬ ಸಂಗತಿ ಈಗ ಬಹಿರಂಗವಾಗಿದೆ.

ಅಂದ ಹಾಗೆ ಈ ವಿಚಾರವನ್ನು ಪತ್ತೆ ಹಚ್ಚಲು ತೆಗೆದುಕೊಂಡಿದ್ದು, ಬರೋಬ್ಬರಿ 27 ವರ್ಷಗಳು ಎಂಬುದು ಗಮನಾರ್ಹ. 1991ರಲ್ಲಿ ಉತ್ತರ ಇಟಲಿಯ ಹಿಮದ ರಾಶಿಯಲ್ಲಿ ಜರ್ಮನಿಯ ಇಬ್ಬರು ಸಂಶೋಧಕರಿಗೆ ವ್ಯಕ್ತಿಯೊಬ್ಬನ ಶವ( ಮಮ್ಮಿ) ಸಿಕ್ಕಿತ್ತು. ಈತ 5,300 ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ ಎಂಬ ಸಂಗತಿ ಈ ಮೊದಲೇ ತಿಳಿದು ಬಂದಿತ್ತು.

ಈ ಮಮ್ಮಿ ಸಿಕ್ಕ ದಿನದಿಂದಲೂ ಸಂಶೋಧಕರ ತಂಡ ವಿವಿಧ ಪರೀಕ್ಷೆಗಳನ್ನು ನಡೆಸುತ್ತಲೇ ಬಂದಿದ್ದು, ಹಲವು ಮಾಹಿತಿಗಳನ್ನು ಕಲೆ ಹಾಕಿತ್ತು. ಇದೀಗ ಆ ವ್ಯಕ್ತಿ ಸಾಯುವ ಮುನ್ನ ಕಾಡು ಮೇಕೆ ಹಾಗೂ ಕೆಂಪು ಜಿಂಕೆಯ ಮಾಂಸ ತಿಂದಿದ್ದ ಎಂಬುದು ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...