alex Certify
ಕನ್ನಡ ದುನಿಯಾ       Mobile App
       

Kannada Duniya

ಮೌಂಟ್ ಎವರೆಸ್ಟ್ ಏರಿದ 53 ವರ್ಷದ ಮಹಿಳೆ

ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್. 29.035 ಅಡಿ ಎತ್ತರವಿರುವ ಈ ಶಿಖರವನ್ನು ತಲುಪುವುದು ಅಷ್ಟು ಸುಲಭದ ಮಾತಲ್ಲ. ಆದ್ರೆ 53 ವರ್ಷದ ಮಹಿಳೆಯೊಬ್ಬರು ಎವರೆಸ್ಟ್ ಶಿಖರವೇರಿ ದಾಖಲೆ ಬರೆದಿದ್ದಾರೆ.

ಸಂಗೀತಾ ಸಿಂಧಿ ಬಾಹ್ಲ ಎವರೆಸ್ಟ್ ಶಿಖರ ಎರಿದ ಜಮ್ಮು ಕಾಶ್ಮೀರದ ಮೊದಲ ಮಹಿಳೆಯಾಗಿದ್ದಾರೆ. ಅಲ್ಲದೆ ಭಾರತದಲ್ಲಿ 53ನೇ ವಯಸ್ಸಲ್ಲಿ ಶಿಖರವೇರಿದ ಮೊದಲ ಮಹಿಳೆಯಾಗಿದ್ದಾರೆ. ಎವರೆಸ್ಟ್ ಶಿಖರ ಹತ್ತಿ ಮೇ 19 ರಂದು ವಾಪಾಸ್ಸಾಗೋ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಸಂಗೀತಾ ಕಳೆದ ವರ್ಷ ಮೊದಲ ಬಾರಿಗೆ ಶಿಖರವೇರಲು ಪ್ರಯತ್ನಿಸಿದ್ರು. ಆದ್ರೆ ಅನಾರೋಗ್ಯದ ಕಾರಣ ಇವರು ಸೇರಿದಂತೆ ಆರು ಮಂದಿ ಅಲ್ಲಿಂದ ವಾಪಸ್ಸಾಗಿದ್ರು.

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲೇ ಹುಟ್ಟಿ ಬೆಳೆದ ಸಂಗೀತ, 1985 ರಲ್ಲಿ ನಡೆದ ‘ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಫೈನಲ್ ಹಂತ ತಲುಪಿದ್ರು ಅನ್ನೋದು ಮತ್ತೊಂದು ವಿಶೇಷ. ಸಧ್ಯ ಈ ಪರ್ವತಾರೋಹಿ ಎವರೆಸ್ಟ್ ಬೇಸ್ ಕ್ಯಾಂಪ್ ನಿಂದ ಕಾಠುಂಡುವಿಗೆ ಮರಳಿದ್ದಾರೆ.

2011 ರಲ್ಲಿ ಪ್ರೇಮಲತಾ ಅವರು ತಮ್ಮ 48 ನೇ ವಯಸ್ಸಿನಲ್ಲಿ ಎವರೆಸ್ಟ್ ಪರ್ವತಾರೋಹಣ ಮಾಡಿದ ದಾಖಲೆಯನ್ನು, ಸಂಗೀತಾ ಮುರಿದಿದ್ದಾರೆ. ವಯಸ್ಸು ಅನ್ನೋದು ಕೇವಲ ಒಂದು ಸಂಖ್ಯೆ. ಮನಸ್ಸಿದ್ದರೆ, ಯಾವುದೇ ವಯಸ್ಸಿನಲ್ಲಿ ನಿಮ್ಮ ಕನಸುಗಳನ್ನು ನನಸಾಗಿಸಬಹುದು ಅನ್ನೋದು ಇವರ ವಾದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...