alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಟ್ಟಡದೊಳಗೇ ಇದೆ ಸಾರ್ವಜನಿಕ ರಸ್ತೆ

china-roof-road_650x400_51498201152

ಚೀನಾದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಶಿಷ್ಟ ಘಟನೆ ನಡೆಯುತ್ತಲೇ ಇರುತ್ತದೆ. ಸಾಮಾಜಿಕ ತಾಣಗಳಲ್ಲಿ ಚಿತ್ರವಿಚಿತ್ರ ಘಟನೆಗಳು ಸುದ್ದಿ ಮಾಡುತ್ತವೆ. ಇದೀಗ ಚೀನಾದ ಕಟ್ಟಡವೊಂದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

chongqing_roof_road

ಚೀನಾದ ಚಾಂಗ್ಕಿಂಗ್ ನಗರದಲ್ಲಿ ಈ 5 ಮಹಡಿಯ ಕಟ್ಟಡವಿದೆ. ಈ ಕಟ್ಟಡದಲ್ಲೇ ರಸ್ತೆ ಕೂಡ ಇರೋದು ವಿಶೇಷ. ಕಟ್ಟಡದ ಟೆರೆಸ್ ಮೇಲೆ ಎರಡು ಪಥಗಳ ಸಾರ್ವಜನಿಕ ರಸ್ತೆಯನ್ನೇ ನಿರ್ಮಾಣ ಮಾಡಲಾಗಿದೆ.

ಬಿಲ್ಡಿಂಗ್ ಮೇಲಿರುವ ರಸ್ತೆಯ ಇಕ್ಕೆಲಗಳಲ್ಲೂ ಮರಗಳು ಹಾಗೂ ಅಂಗಡಿಗಳೆಲ್ಲವೂ ಇವೆ. ಗುಡ್ಡ ಪ್ರದೇಶದಲ್ಲಿ ಈ ಕಟ್ಟಡವಿದ್ದು, ಟೆರೆಸ್ ಮೇಲಿರುವ ರಸ್ತೆ ಇಡೀ ಕಾಂಪ್ಲೆಕ್ಸ್ ಅನ್ನೇ ಸುತ್ತುವರಿದಿದೆ. ಕಟ್ಟಡದ ನೆಲಮಹಡಿಯಲ್ಲಿ ಅಂಗಡಿಗಳಿದ್ದು, ಉಳಿದ ನಾಲ್ಕೂ ಮಹಡಿಗಳಲ್ಲಿ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

chongqing_roof_road2

ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸದ್ದು ಕಿವಿಗೆ ಅಪ್ಪಳಿಸದಂತೆ ವಿಶಿಷ್ಟ ವ್ಯವಸ್ಥೆ ಮಾಡಲಾಗಿದೆ. ಚಾಂಗ್ಕಿಂಗ್ ನಗರದ ಜನಸಂಖ್ಯೆ 8.5 ಮಿಲಿಯನ್. ಸ್ಥಳಾವಕಾಶದ ಕೊರತೆ ಇರೋದ್ರಿಂದ ಇಂತಹ ವಿನೂತನ ಪ್ರಯತ್ನಗಳನ್ನು ಜನರು ಮಾಡುತ್ತಿದ್ದಾರೆ.

 

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...