alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಲಿಂಗಿನಿಂದ ಬಿದ್ದ ಹೆಬ್ಬಾವು ಕಂಡು ಎದ್ದುಬಿದ್ದು ಓಡಿದ ಬ್ಯಾಂಕ್ ಸಿಬ್ಬಂದಿ

ಗುಂಪೊಂದು ನಿಂತು ಮಾತನಾಡುತ್ತಿರುವ ಸಂದರ್ಭದಲ್ಲಿ ಹೆಬ್ಬಾವೊಂದು ಅಚಾನಕ್ ಆಗಿ ಮೇಲಿಂದ ಬಿದ್ದರೆ ಪರಿಸ್ಥಿತಿ ಏನಾಗಬೇಡ? ಇಂಥ ಘಟನೆಯನ್ನು ನೆನೆದರೇ ಎದೆ ಝಲ್ಲೆನ್ನುತ್ತದೆ. ಅಂಥದ್ದರಲ್ಲಿ ಹೀಗೊಂದು ಘಟನೆ ದಕ್ಷಿಣ ಚೀನಾದ ನ್ಯಾನಿಂಗ್ ನಗರದಲ್ಲಿರುವ ಚೀನಾ ಇಂಡಸ್ಟ್ರಿಯಲ್ ಆಂಡ್ ಕಮರ್ಶಿಯಲ್ ಬ್ಯಾಂಕ್ ಶಾಖೆಯಲ್ಲಿ ಕಳೆದ ಶುಕ್ರವಾರ ನಡೆದಿದ್ದು ನೆರೆದಿದ್ದವರು ಜೀವ ಕೈಯಲ್ಲಿ ಹಿಡಿದು ಪೇರಿ ಕಿತ್ತಿದ್ದಾರೆ.

ಅಂದು ಬ್ಯಾಂಕಿನ ಒಂಬತ್ತು ಮಂದಿ ಸಭೆ ಸೇರಿದ್ದರು. ಆಗ ಸುಮಾರು ಐದಡಿ ಉದ್ದದ ಹೆಬ್ಬಾವೊಂದು ಸೀಲಿಂಗ್ ನಿಂದ ನೆಲಕ್ಕೆ ಬಿದ್ದಿದೆ. ಸಭೆ ಸೇರಿದ್ದ ಅಷ್ಟೂ ಮಂದಿ ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲೇ ಕಾಲಿಗೆ ಬುದ್ಧಿ ಹೇಳಿದ್ದಾರೆ. ಬಿದ್ದ ಕ್ಷಣದಲ್ಲೇ ಚೇತರಿಸಿಕೊಂಡ ಹೆಬ್ಬಾವು ಕೋಣೆಯಲ್ಲಿ ಸರ್ರನೆ ಹರಿದಾಡಿದೆ. ಪುಣ್ಯವೆಂದರೆ ಹೆಬ್ಬಾವು ಯಾರ ಮೈಮೇಲೂ ಬಿದ್ದಿಲ್ಲ.

ಈ ದೃಶ್ಯ ಬ್ಯಾಂಕಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಹಲವರು ಶಾಕಿಂಗ್ ಕಾಮೆಂಟ್ ಗಳನ್ನು ನೀಡಿದ್ದಾರೆ.

ನೋಡುವವರಿಗೇ ಇಷ್ಟೊಂದು ಶಾಕ್ ಆಗಿದ್ದರೆ, ಅಲ್ಲಿದ್ದವರ ಕತೆ ಕೊಂಚ ಊಹಿಸಿ. ಇಂತಹದ್ದೇ ಘಟನೆ ಈ ಹಿಂದೆ ನ್ಯೂಯಾರ್ಕ್ ನಲ್ಲಿ ನಡೆದಿತ್ತು. ಅಂದು ಸೀಲಿಂಗಿನಿಂದ ಹೆಬ್ಬಾವು ಬಿದ್ದಿದ್ದು ಕೆಳಗೆ ಮಲಗಿದ್ದವನ ಮೇಲೆ! ಇನ್ನೇನು ಹೇಳಬೇಕಾಗಿಲ್ಲ ಅಲ್ವಾ?

The quickest way to break up a staff meeting

The quickest way to break up a staff meeting.

Posted by Shanghaiist on Friday, October 12, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...