alex Certify
ಕನ್ನಡ ದುನಿಯಾ       Mobile App
       

Kannada Duniya

ಪರಮಾಣು ಪರೀಕ್ಷೆಯಿಂದ ಉತ್ತರ ಕೊರಿಯಾದಲ್ಲಿ ಕೃತಕ ಭೂಕಂಪ

download (1)ಅಂತರಾಷ್ಟ್ರೀಯ ಮಟ್ಟದ ಒತ್ತಡದ ಹೊರತಾಗಿಯೂ ಉತ್ತರ ಕೊರಿಯಾ 5 ನೇ ಬಾರಿಗೆ ಪರಮಾಣು ಪರೀಕ್ಷೆ ನಡೆಸಿದೆ. ಈ ಬಾರಿಯ ಪರಮಾಣು ಪರೀಕ್ಷೆ ಉತ್ತರ ಕೊರಿಯಾದಲ್ಲಿ ಕೃತಕ ಭೂಕಂಪವನ್ನೇ ಸೃಷ್ಟಿಸಿದೆ.

ರಿಕ್ಟರ್ ಮಾಪಕದಲ್ಲಿ 5.3 ರಷ್ಟು ತೀವ್ರತೆ ದಾಖಲಾಗಿದ್ದು, ಪ್ಯೋಂಗ್ಯಾನ್ ನಲ್ಲಿ ಕಂಪನದ ಅನುಭವವಾಗಿದೆ. ದೇಶದ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಉತ್ತರ ಕೊರಿಯಾ ಪರಮಾಣು ಪರೀಕ್ಷೆ ನಡೆಸಿದೆ. ಪ್ಯೋಂಗ್ಯಾನ್ ನಲ್ಲಿ ಈ ವರ್ಷ ಎರಡನೇ ಬಾರಿಗೆ ನ್ಯೂಕ್ಲಿಯರ್ ಟೆಸ್ಟ್ ನಡೆದಿದ್ದು, ಜನವರಿಯಲ್ಲಿ ಭೂಗತವಾಗಿ ಹೈಡ್ರೋಜನ್ ಬಾಂಬ್ ಅನ್ನು ಸ್ಫೋಟಿಸಲಾಗಿತ್ತು. ಈ ಮೂಲಕ ಉತ್ತರ ಕೊರಿಯಾ ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.

ಭೂಕಂಪದ ತೀವ್ರತೆ ಗಮನಿಸಿದ್ರೆ 10 ಕಿಲೋ ಟನ್ ಸ್ಫೋಟಕಗಳನ್ನು ಬಳಸಲಾಗಿದೆ ಎನ್ನಲಾಗ್ತಾ ಇದೆ. ಜಾಗತಿಕ ಮಟ್ಟದ ಒತ್ತಡಕ್ಕೂ ಮಣಿಯದ ಉತ್ತರ ಕೊರಿಯಾ ಮತ್ತಷ್ಟು ಪರಮಾಣು ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದೆ. ಈಗ ಖಂಡಾಂತರ ಕ್ಷಿಪಣಿಗಳ ಮೇಲೆ ಅಣ್ವಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವುದಾಗಿ ಹೇಳಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...