alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ನಲ್ಲಿ ಕಳೆದಿದ್ದ ಉಂಗುರ ಸಿಕ್ಕಿದ್ಹೇಗೆ..?

ಮಸಾಚುಸೆಟ್ಸ್ ನಲ್ಲಿ ಕಳೆದು ಹೋಗಿದ್ದ ಉಂಗುರವೊಂದು 47 ವರ್ಷಗಳ ಬಳಿಕ ದಂಪತಿಯನ್ನು ಒಂದು ಮಾಡಿದೆ. 1970ರಲ್ಲಿ ಪ್ಯಾಟ್ರಿಕ್ ಹೋಗನ್ ಎಂಬಾತ ಪತ್ನಿಯ ಜೊತೆಗೆ ಹನಿಮೂನ್ ಗೆ ಬಂದಿದ್ದ. ಮ್ಯಾನ್ ಹ್ಯಾಟನ್ ಕಾಲೇಜಿನಲ್ಲಿ ಪದವಿ ಪಡೆದಿದ್ದ ಪ್ಯಾಟ್ರಿಕ್ ಗೆ ಪತ್ನಿ ಚಿನ್ನದ ಉಂಗುರವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ಲು.

ಬೀಚ್ ನಲ್ಲಿ ಕಾಲ ಕಳೆಯುತ್ತಿದ್ದಾಗ ಆ ಉಂಗುರ ಕಳೆದು ಹೋಗಿತ್ತು. ಕಳೆದ ಜುಲೈನಲ್ಲಿ ಜಿಮ್ ವರ್ತ್ ಎಂಬಾತ ಅದೇ ಪ್ರದೇಶದಲ್ಲಿ ಮೆಟಲ್ ಡಿಟೆಕ್ಟರ್ ಇಟ್ಟುಕೊಂಡು ಕಸ ಗುಡಿಸುತ್ತಿದ್ದ. ಆಗ ಚಿನ್ನದ ಉಂಗುರ ಪತ್ತೆಯಾಗಿತ್ತು. ಅದರ ಮೇಲೆ ಪ್ಯಾಟ್ರಿಕ್ ಹೋಗನ್ ಹೆಸರು ಬರೆದಿತ್ತು.

ಆ ಹೆಸರನ್ನು ಜಿಮ್ ಗೂಗಲ್ ನಲ್ಲಿ ಸರ್ಚ್ ಮಾಡಿದ್ದ. ಆಗ ಪ್ಯಾಟ್ರಿಕ್ ಪತ್ನಿ ಕ್ರಿಸ್ಟಿನ್ ಬರೆದಿದ್ದ ಪುಸ್ತಕದ ವಿವರ ಸಿಕ್ಕಿತ್ತು. ಆ ಪುಸ್ತಕದ ಚಾಪ್ಟರ್ ಒಂದರಲ್ಲಿ ಕ್ರಿಸ್ಟಿನ್, ಪ್ಯಾಟ್ರಿಕ್ ಜೊತೆಗಿನ ಪ್ರೀತಿ ಹಾಗೂ ಉಂಗುರದ ಬಗ್ಗೆಯೂ ಬರೆದುಕೊಂಡಿದ್ಲು. ಕೂಡಲೇ ಅವರ ಫೋನ್ ನಂಬರ್ ಸಂಪಾದಿಸಿದ ಜಿಮ್ ಕರೆ ಮಾಡಿ ಉಂಗುರ ಸಿಕ್ಕಿದ ವಿಷಯ ತಿಳಿಸಿದ್ದ.

47 ವರ್ಷಗಳ ಬಳಿಕ ತಮ್ಮ ಪ್ರೀತಿಯ ಸಂಕೇತ ಮರಳಿ ಸಿಕ್ಕ ವಿಷಯ ಕೇಳಿ ದಂಪತಿ ಸಂತಸಗೊಂಡಿದ್ರು. ಜಿಮ್ ಆ ಉಂಗುರವನ್ನು ಸ್ವಚ್ಛಮಾಡಿ ಅವರಿಗೆ ಕಳಿಸಿಕೊಟ್ಟಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...