alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹದಿಂದ ತಪ್ಪಿಸಿಕೊಳ್ಳಲು ಹೋದ 400 ಎಮ್ಮೆಗಳು ನದಿಯಲ್ಲಿ ಮುಳುಗಿ ಸಾವು

ಸಿಂಹ ಅಟ್ಟಿಸಿಕೊಂಡು ಬಂದ ಕಾರಣಕ್ಕೆ ಅದರಿಂದ ತಪ್ಪಿಸಿಕೊಳ್ಳಲು ಮುಂದಾದ 400 ಕ್ಕೂ ಅಧಿಕ ಎಮ್ಮೆಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಮೀಬಿಯಾದ ಗಡಿ ಸಮೀಪದಲ್ಲಿ ನಡೆದಿದೆ.

ಎಮ್ಮೆಗಳು ಅರಣ್ಯ ಪ್ರದೇಶದ ಸಮೀಪದಲ್ಲಿ ಮೇಯಲು ಹೋಗಿದ್ದ ವೇಳೆ ಮರಿಗಳನ್ನು ಹೊಂದಿದ್ದ ಸಿಂಹಗಳ ಅಟ್ಟಿಸಿಕೊಂಡು ಬಂದವೆಂದು ಹೇಳಲಾಗಿದ್ದು, ಇದರಿಂದ ಭಯ ಭೀತಿಗೊಂಡ ಎಮ್ಮೆಗಳು ತಪ್ಪಿಸಿಕೊಳ್ಳಲು ಮುಂದಾದ ವೇಳೆ ಚೋಬೆ ನದಿಗೆ ಬಿದ್ದಿವೆ.

ನದಿ ನೀರಿನ ಹರಿವು ಹೆಚ್ಚಾಗಿದ್ದು ಹಾಗೂ ಕಡಿದಾದ ದಡವಿದ್ದ ಕಾರಣ ಮೇಲೆರಲು ಸಾಧ್ಯವಾಗದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಎಮ್ಮೆಗಳು ಸಾವನ್ನಪ್ಪಿವೆ ಎಂದು ಬೋಟ್ಸ್ವಾನ ಪರಿಸರ ಸಚಿವಾಲಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...