alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಈ ಪುಟಾಣಿಯ ಗೀತ ನಮನ

ಮೃತ ಸಹೋದರಿಯ ನೆನಪಿನಲ್ಲಿ 4 ವರ್ಷದ ಬಾಲಕನ ಹಾಡಿರೋ ಹಾಡು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಡಿಸೆಂಬರ್ 30ರಂದು ಸಮೀರ್ ಡೀಯಾಸ್ ಎಂಬುವವರು ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

ಅಲೆಕ್ಸಾಂಡರ್ ನ ಸಹೋದರಿ ಬದುಕಿದ್ದಿದ್ರೆ ಆ ದಿನ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಆದ್ರೆ ಮೇ ತಿಂಗಳಿನಲ್ಲೇ ಆಕೆ ಮೃತಪಟ್ಟಿದ್ದಳು. ಅವಳಿಗಾಗಿ ಪುಟಾಣಿ ಗಾಯಕ ಅಲೆಕ್ಸಾಂಡರ್, ರಿಮೆಂಬರ್ ಮಿ ಅನ್ನೋ ಹಾಡನ್ನು ಹಾಡಿದ್ದಾನೆ.

ಜೊತೆಗೆ ಗಿಟಾರ್ ಕೂಡ ನುಡಿಸಿದ್ದಾನೆ. 4 ತಿಂಗಳ ಮಗುವಾಗಿದ್ದ ಸ್ಟೆಲ್ಲಾ ಗ್ರೇಸ್ ಕಿಡ್ನಿ ಸಮಸ್ಯೆಯಿಂದ ಮೃತಪಟ್ಟಿದ್ದಳು. ಅವಳ ಸಮಾಧಿಗೆ ಪುಷ್ಪಗಳಿಂದ ಅಲಂಕರಿಸಿ ಕುಟುಂಬದವರೆಲ್ಲ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಗುವನ್ನು ತುಂಬಾ ಮಿಸ್ ಮಾಡಿಕೊಳ್ತಿರೋದಾಗಿ ದುಃಖ ತೋಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...