alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ಕು ತಿಂಗಳ ನಂತರ ಹುಟ್ಟೂರು ತಲುಪಿದ ಭಾರತೀಯನ ಮೃತದೇಹ

ಅರಬ್ ರಾಷ್ಟ್ರಕ್ಕೆ ಕೆಲಸಕ್ಕೆಂದು ತೆರಳಿದ್ದ ಭಾರತೀಯನೊಬ್ಬನ ಮೃತದೇಹ ನಾಲ್ಕು ತಿಂಗಳ ಬಳಿಕ ಅವನ ಮನೆಯವರಿಗೆ ಹಸ್ತಾಂತರವಾದ ಘಟನೆ ನಡೆದಿದೆ. ಮಧ್ಯಪ್ರದೇಶದ ಯೂಸುಫ್ ಖಾನ್ ರಷೀದ್ ಖಾನ್ ಎಂಬ 50 ವರ್ಷದ ವ್ಯಕ್ತಿಯ ಮೃತದೇಹ 2018ರ ಏಪ್ರಿಲ್ 12ರಂದು ಆತ ಕೆಲಸ ಮಾಡುವ ಸ್ಥಳದಲ್ಲಿ ಪತ್ತೆಯಾಗಿತ್ತು.

ಆನಂತರದಲ್ಲಿ ಆತನ ಕಳೇಬರವನ್ನು ಅಜ್ಮನ್ ಅಲ್ ರಷೀದಿಯಾ ಪ್ರದೇಶದ ಶವಾಗಾರದಲ್ಲಿಡಲಾಗಿತ್ತು. ಭಾರತೀಯ ರಾಯಭಾರ ಕಚೇರಿಯನ್ನ ಸಂಪರ್ಕಿಸಿದ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮೃತದೇಹವನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು. ಮಾದಕ ವಸ್ತು ಸೇವಿಸಿ ಯೂಸುಫ್ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಮರಣೋತ್ತರ ಪರೀಕ್ಷೆ ವರದಿ ಹೇಳ್ತಿತ್ತು.

ಆನಂತರದಲ್ಲಿ ಅರಬ್ ರಾಷ್ಟ್ರದಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಮೃತನ ಬಂಧುಗಳಿಗೆ ವಿಚಾರ ತಿಳಿಸೋಕೆ ಸಾಕಷ್ಟು ಕಷ್ಟಪಡಬೇಕಾಯ್ತು. ಆತ ಪಾಸ್ ಪೋರ್ಟ್ ನಲ್ಲಿ ನೀಡಿದ್ದ ಮೊದಲ ವಿಳಾಸದಲ್ಲಿ ಆತನ ಬಂಧುಗಳು ಯಾರು ಸಿಗಲಿಲ್ಲ. ಕೊನೆಗೆ ಮುಸ್ಲಿಂ ಪ್ರಾರ್ಥನಾ ಮಂದಿರಗಳಲ್ಲಿ ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದರೂ ಪ್ರಯೋಜನವಾಗಲಿಲ್ಲ.

ಕೊನೆಗೆ ಭಾರತೀಯ ರಾಯಭಾರ ಇಲಾಖೆ ಅಧಿಕಾರಿಗಳು ಆತ ಪಾಸ್ಪೋರ್ಟ್ನಲ್ಲಿ ನೀಡಿದ್ದ ಎರಡನೇ ವಿಳಾಸ ಇದ್ದದ್ದನ್ನು ಪತ್ತೆ ಹಚ್ಚಿದರು. ಭಾರತದ ಪೊಲೀಸರಿಗೆ ಆ ವಿಳಾಸವನ್ನು ಪತ್ತೆ ಹಚ್ಚುವಂತೆ ಸೂಚಿಸಲಾಯ್ತು. ಕೊನೆಗೂ ಮಧ್ಯಪ್ರದೇಶದ ನಗಾಡ ಪ್ರದೇಶದಲ್ಲಿ ಆ ವಿಳಾಸವನ್ನು ಪತ್ತೆ ಹಚ್ಚಿದ ಪೊಲೀಸರು ಮೃತನ ಮನೆಯವರಿಗೆ ಯುಸೂಫ್ ಸಾವಿನ ಸುದ್ದಿ ಮುಟ್ಟಿಸಿ ಮನೆಯವರಿಗೆ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...