alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಕೈನಲ್ಲಿದ್ದ ಮಗು ಎಸ್ಕಲೇಟರ್ ನಿಂದ ಜಾರಿ ಬಿತ್ತು..!

download

ಎಸ್ಕಲೇಟರ್ ಗೆ ನಾಲ್ಕು ತಿಂಗಳ ಮಗುವೊಂದು ಬಲಿಯಾಗಿದೆ. ಮಹಿಳೆಯೊಬ್ಬಳು ನಾಲ್ಕು ತಿಂಗಳ ಮಗುವನ್ನು ಎತ್ತಿಕೊಂಡು ಎಸ್ಕಲೇಟರ್ ಏರಿದ್ದಳು. ಮೆಟ್ಟಿಲಿರುವ ಎಸ್ಕಲೇಟರ್ ನಿಂದ ಕಾಲು ಜಾರಿದೆ. ಕಂಕುಳಲ್ಲಿದ್ದ ಮಗು ಕೆಳಗೆ ಬಿದ್ದಿದೆ.

ನಾಲ್ಕನೇ ಮಹಡಿಯಲ್ಲಿ ಈ ಘಟನೆ ನಡೆದಿದೆ. ಇನ್ನೊಂದು ಮಗು ಕೂಡ ಎಸ್ಕಲೇಟರ್ ನ ಕೆಳಗಿನ ಮೆಟ್ಟಿಲಿನಲ್ಲಿತ್ತು. ಅದಕ್ಕೆ ಸ್ವಲ್ಪ ಗಾಯಗಳಾಗಿದ್ದು, ನಾಲ್ಕು ತಿಂಗಳ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಶಾಂಘೈನ ಮಾಲ್ ನಲ್ಲಿ ಈ ಘಟನೆ ನಡೆದಿದೆ.

ಎಸ್ಕಲೇಟರ್ ಪವರ್ ಸೇವಿಂಗ್ ನಲ್ಲಿತ್ತು. ಮಹಿಳೆ ಎಸ್ಕಲೇಟರ್ ಮೇಲೆ ಕಾಲಿಡುತ್ತಿದ್ದಂತೆ ಎಸ್ಕಲೇಟರ್ ಚಲಿಸಲು ಶುರುವಾಗಿದೆ. ಆಗ ಮಹಿಳೆ ನಿಯಂತ್ರಣ ತಪ್ಪಿದೆ ಎಂದು ಮಾಲ್ ಸಿಬ್ಬಂದಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...