alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಬೇಡದ ಗರ್ಭ ಹಾಗೂ ಗುಪ್ತ ರೋಗಗಳಿಂದ ಪಾರಾಗಲು ಕಾಂಡೋಮ್ ಬಳಸುವುದು ಉತ್ತಮ. ಆದ್ರೆ ಕಾಂಡೋಮ್ ಬಳಸುವಾಗ ಕೆಲವೊಂದು ತಪ್ಪುಗಳಾಗುತ್ತವೆ. ಅವುಗಳ ಬಗ್ಗೆ ನೀವು ಎಚ್ಚರ ವಹಿಸೋದು ಉತ್ತಮ.

ಕಾಂಡೋಮ್ ಖರೀದಿ ಮಾಡಿದ ಮೇಲೆ ಅದರ ಮೇಲೆ ಮುದ್ರಿಸಿರುವ ಸಲಹೆ, ಸೂಚನೆಗಳನ್ನು ಓದಿಕೊಳ್ಳಿ. ಸರಿಯಾದ ಸೈಝ್ ನ ಕಾಂಡೋಮ್ ಗಳನ್ನೇ ಕೊಂಡುಕೊಳ್ಳಿ. ಇನ್ ಸರ್ಟ್ ಮಾಡಿಕೊಳ್ಳುವ ಮುನ್ನ ಅದೇನಾದ್ರೂ ಉಲ್ಟಾ ಆಗಿದೆಯಾ ಅನ್ನೋದನ್ನು ಪರಿಶೀಲಿಸಿ.

ರಬ್ಬರ್ ಒಳಮುಖವಾದಲ್ಲಿ ಕಾಂಡೋಮ್ ಕಳಚಿ ಹೋಗುವ ಸಾಧ್ಯತೆ ಇರುತ್ತದೆ. ಕಾಂಡೋಮ್ ಧರಿಸುವ ಮುನ್ನವೇ ಅದನ್ನು ತೆರೆಯಬೇಡಿ. ಯಾಕಂದ್ರೆ ನಂತರ ಅದು ಫಿಟ್ ಆಗಿ ಕೂರುವುದಿಲ್ಲ. ರಬ್ಬರ್ ಎಳೆದು ಹೋಗಬಹುದು ಅಥವಾ ಲೀಕ್ ಆಗುವ ಸಾಧ್ಯತೆ ಇರುತ್ತದೆ.

ಕಾಂಡೋಮ್ ಖರೀದಿಸುವ ಮುನ್ನ ಸೈಜ್ ಬಗ್ಗೆ ಗಮನವಿರಲಿ. ಅಗತ್ಯಕ್ಕಿಂತ ದೊಡ್ಡ ಸೈಜ್ ಕೊಂಡುಕೊಂಡಲ್ಲಿ ಅದು ಕಳಚಿ ಹೋಗುವ ಸಾಧ್ಯತೆ ಇರುತ್ತದೆ. ಕಾಂಡೋಮ್ ಗಳನ್ನು ವೈಜ್ಞಾನಿಕವಾಗಿ ಪ್ರಯೋಗಕ್ಕೆ ಒಳಪಡಿಸಲಾಗಿರುತ್ತದೆ. ಎಷ್ಟು ಕಾಲ ಅದನ್ನು ಬಳಸಬಹುದು ಅನ್ನೋದಕ್ಕೆ ನಿರ್ದಿಷ್ಟ ಸಮಯ ನಿಗದಿಯಾಗಿರುತ್ತದೆ.

ಹಾಗಾಗಿ ಅದರ ಮೇಲೆ ತಯಾರಿಸಿದ ದಿನಾಂಕ ಮತ್ತು ಎಕ್ಸ್ ಪೈರಿ ದಿನಾಂಕ ಎರಡನ್ನೂ ನಮೂದಿಸಿರುತ್ತಾರೆ. ಹಾಗಾಗಿ ಕಾಂಡೋಮ್ ಖರೀದಿಸುವ ಸಂದರ್ಭದಲ್ಲಿ ಎಕ್ಸ್ ಪೈರಿ ಆಗಿ ಹೋಗಿದೆಯಾ ಎಂಬುದನ್ನು ಮರೆಯದೇ ಪರಿಶೀಲಿಸಿಕೊಳ್ಳಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...