alex Certify
ಕನ್ನಡ ದುನಿಯಾ       Mobile App
       

Kannada Duniya

26 ಅಡಿ ಹೆಬ್ಬಾವಿನಿಂದ ಪಾರಾದ್ಲೂ 4 ಅಡಿ ಉದ್ದದ ವೃದ್ಧೆ

ಹೆಬ್ಬಾವಿನ ಹೆಸರು ಕೇಳಿದ್ರೆ ಸಾಕು ಎಂಥವರಿಗೂ ಭಯ ಶುರುವಾಗೋದು ಸಹಜ. ಹೆಬ್ಬಾವಿನ ಹಿಡಿತಕ್ಕೆ ಸಿಕ್ಕಿಹಾಕಿಕೊಂಡ್ರೆ ಬಿಡಿಸಿಕೊಳ್ಳೋದಂತೂ ಅಸಾಧ್ಯದ ಮಾತು. 85 ವರ್ಷದ ಥೈಲ್ಯಾಂಡ್ ಸನ್ಯಾಸಿನಿ ನಿಜಕ್ಕೂ ಅದೃಷ್ಟವಂತೆ. ಯಾಕಂದ್ರೆ ಭಯಾನಕ ಹೆಬ್ಬಾವಿನ ಹಿಡಿತದಿಂದ ಈ ವೃದ್ಧೆ ಪಾರಾಗಿ ಬಂದಿದ್ದಾಳೆ.

ಚಿನ್ ದರಚನ್ ಎಂಬ ಈ ಸನ್ಯಾಸಿನಿ ಕೇವಲ 4 ಅಡಿ ಎತ್ತರವಿದ್ದಾಳೆ. ರಾತ್ರಿ ಟಾಯ್ಲೆಟ್ ಗೆ ಹೋಗಿದ್ದ ಚಿನ್, ಅಲ್ಲಿಂದ ಹೊರಬರುವಾಗ ಅವಳ ಮೇಲೆ 26 ಅಡಿ ಉದ್ದದ ಹೆಬ್ಬಾವು ದಾಳಿ ಮಾಡಿತ್ತು. ಮೊದಲು ಆಕೆಯ ಕಾಲಿಗೆ ಕಚ್ಚಿದ ಹೆಬ್ಬಾವು ನಂತರ ನಿಧಾನವಾಗಿ ಅವಳ ಮೈಗೆ ಸುತ್ತಿಕೊಳ್ಳಲಾರಂಭಿಸಿತ್ತು.

ಕೂಡಲೇ ಚಿನ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಉಳಿದ ಸನ್ಯಾಸಿಗಳೆಲ್ಲ ಸ್ಥಳಕ್ಕೆ ಧಾವಿಸಿ ಬಂದ್ರು. ಇಕ್ಕಳದಿಂದ ಹೊಡೆದು ಹೆಬ್ಬಾವಿನ ಹಿಡಿತದಿಂದ ವೃದ್ಧೆಯನ್ನು ರಕ್ಷಿಸಿದ್ದಾರೆ. ಆದ್ರೂ ಹೆಬ್ಬಾವು ಚಿನ್ ಕಾಲಿಗೆ ಹಲ್ಲಿನಿಂದ ಕಚ್ಚಿತ್ತು. ಒಟ್ಟು 20 ಹೊಲಿಗೆಗಳನ್ನು ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...