alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ವರ್ಷದಂದು ಜನಿಸಿರುವ ಮಕ್ಕಳೆಷ್ಟು ಗೊತ್ತಾ…?

ಹೊಸ ವರ್ಷದಂದು ವಿಶ್ವದಲ್ಲಿ ಜನಿಸಿರುವ ಮಕ್ಕಳ ವಿವರವನ್ನು ವಿಶ್ವ ಸಂಸ್ಥೆಯ ಮಕ್ಕಳ ನಿಧಿ (UNICEF) ಬಿಡುಗಡೆ ಮಾಡಿದ್ದು, ವಿಶ್ವದಾದ್ಯಂತ ಒಟ್ಟು 386,000 ಮಕ್ಕಳು ಅಂದು ಜನಿಸಿವೆ.

ಈ ಮಕ್ಕಳ ಪೈಕಿ ಒಂಭತ್ತು ದೇಶಗಳಲ್ಲಿ ಅರ್ಧದಷ್ಟು ಮಕ್ಕಳು ಜನಿಸಿದ್ದು, ಭಾರತ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ (69,070), ಚೀನಾ (44,760), ನೈಜೀರಿಯಾ (20,210), ಪಾಕಿಸ್ತಾನ (14,910), ಇಂಡೋನೆಷ್ಯಾ (13,370), ಯುಎಸ್ (11,280), ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೋ (9,400), ಇಥಿಯೋಪಿಯಾ (9,020) ಹಾಗೂ ಬಾಂಗ್ಲಾದೇಶದಲ್ಲಿ (8,370) ಮಕ್ಕಳು ಜನಿಸಿವೆ.

ಕೆಲ ಮಕ್ಕಳು ಜನಿಸಿದ ದಿನದಂದೇ ಸಾವನ್ನಪ್ಪಿದ್ದು, ಅವಧಿಪೂರ್ವ ಹೆರಿಗೆ, ಹೆರಿಗೆ ಸಂದರ್ಭದಲ್ಲಿ ಆದ ಸಮಸ್ಯೆ ಹಾಗೂ ಸೋಂಕು ಇದಕ್ಕೆ ಕಾರಣವೆಂದು ಯೂನಿಸೆಫ್ ಹೇಳಿದೆ. ಮುಂದಿನ ತಿಂಗಳು ಯೂನಿಸೆಫ್ ವಿಶ್ವದಾದ್ಯಂತ “Every Child Alive” ಎಂಬ ಅಭಿಯಾನ ನಡೆಸುತ್ತಿದ್ದು, ಗರ್ಭಿಣಿ ಮಹಿಳೆಯರು ಹಾಗೂ ಜನಿಸುವ ಮಕ್ಕಳ ಆರೋಗ್ಯಕ್ಕೆ ಇದರಲ್ಲಿ ಒತ್ತು ನೀಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...