alex Certify
ಕನ್ನಡ ದುನಿಯಾ       Mobile App
       

Kannada Duniya

38 ಮಂದಿ ಭಾರತೀಯರನ್ನು ವಶಕ್ಕೆ ಪಡೆದ ಯುಕೆ ಅಧಿಕಾರಿಗಳು

passport_7ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ 38 ಮಂದಿ ಭಾರತೀಯರನ್ನು ಯುಕೆ ವಲಸೆ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಪೈಕಿ 29 ಮಂದಿ ಪುರುಷರು ಹಾಗೂ 9 ಮಂದಿ ಮಹಿಳೆಯರಿದ್ದು, ಇವರುಗಳನ್ನು ಮರಳಿ ಭಾರತಕ್ಕೆ ಕಳುಹಿಸಿಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ.

ವಶಕ್ಕೆ ಪಡೆದವರು ಮಿಡ್ ಲ್ಯಾಂಡ್ಸ್ ನ ಲಿಸೆಸ್ಟರ್ ನ ಉಡುಪು ತಯಾರಿಕಾ ಕಾರ್ಖಾನೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅಕ್ರಮವಾಗಿ ಇರಿಸಿಕೊಂಡಿದ್ದ ಕಾರ್ಖಾನೆಯವರಿಗೂ ಭಾರೀ ದಂಡ ವಿಧಿಸುವ ಸಾಧ್ಯತೆಯಿದೆ. ದಂಡದ ಮೊತ್ತ ಪ್ರತಿ ವ್ಯಕ್ತಿಗೆ 20 ಸಾವಿರ ಪೌಂಡ್ ಗಳೆಂದು ಹೇಳಲಾಗಿದೆ.

ವಶಕ್ಕೆ ಪಡೆದವರ ಪೈಕಿ 7 ಮಂದಿ ಭಾರತೀಯರು ಅಕ್ರಮವಾಗಿ ದೇಶ ಪ್ರವೇಶಿಸಿದ್ದರೆ ಮಿಕ್ಕವರು ವೀಸಾ ಅವಧಿ ಮುಗಿದಿದ್ದರೂ ಅಲ್ಲಿಯೇ ನೆಲೆಸಿದ್ದರೆಂದು ಹೇಳಲಾಗಿದೆ. ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆ ಹಚ್ಚಲು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ವಲಸೆ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...