alex Certify
ಕನ್ನಡ ದುನಿಯಾ       Mobile App
       

Kannada Duniya

ರಷ್ಯಾದ ಶಾಪಿಂಗ್ ಮಾಲ್ ನಲ್ಲಿ ಭೀಕರ ಬೆಂಕಿ ದುರಂತ

ರಷ್ಯಾದ ಶಾಪಿಂಗ್ ಸೆಂಟರ್ ನಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿದೆ. 37 ಮಂದಿ ಮೃತಪಟ್ಟಿದ್ದು, 69 ಜನರು ನಾಪತ್ತೆಯಾಗಿದ್ದಾರೆ. 43 ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.

ಕೆಮೆರೊವೋನಲ್ಲಿರುವ ವಿಂಟರ್ ಚೆರ್ರಿ ಮಾಲ್ ನಲ್ಲಿ ಸಂಭವಿಸಿದ ದುರ್ಘಟನೆ ಇದು. ಈ ಮಾಲ್ ಮಾಸ್ಕೋದಿಂದ 3000 ಕಿಮೀ ದೂರದಲ್ಲಿದೆ. ಮಾಲ್ ನ ಟಾಪ್ ಫ್ಲೋರ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು.

ಇದು ಸುಮಾರು 1500 ಚದರ ಅಡಿ ವಿಸ್ತಾರವಾಗಿದೆ. ನೂರಾರು ಗ್ರಾಹಕರು ಅಲ್ಲಿ ನೆರೆದಿದ್ದರು. ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಗ್ರಾಹಕರು ಗಾಬರಿಯಿಂದ ಓಡಿದ್ದಾರೆ.

ಆದ್ರೆ ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ 37 ಮಂದಿ ಸಜೀವ ದಹನವಾಗಿದ್ದಾರೆ. 2013ರಲ್ಲಿ ಈ ಮಾಲ್ ಆರಂಭಿಸಲಾಗಿತ್ತು. ಇಲ್ಲಿ ಸಿನೆಮಾ ಹಾಲ್, ಪೆಟ್ಟಿಂಗ್, ಚಿಲ್ಡ್ರನ್ ಸೆಂಟರ್ ಎಲ್ಲವೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...