alex Certify
ಕನ್ನಡ ದುನಿಯಾ       Mobile App
       

Kannada Duniya

320 ಕೆಜಿ ತೂಕದ ಮಹಿಳೆಯ ಚರ್ಮದಲ್ಲಿ ಹುಳಗಳ ರಾಶಿ

ಅಮೆರಿಕದಲ್ಲಿ 320 ಕೆಜಿ ತೂಕದ ಮಹಿಳೆಯೊಬ್ಬಳಿಗೆ ಚರ್ಮದ ಮಡಿಕೆಗಳೊಳಗೆ ಹುಳಗಳಾಗಿವೆ. ಲಿಸಾ ಫ್ಲೆಮಿಂಗ್ ಎಂಬ 49 ವರ್ಷದ ಮಹಿಳೆ ಈಗ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾಳೆ. 15ನೇ ವರ್ಷದಲ್ಲಿಯೇ ಲಿಸಾ ಮಗುವಿಗೆ ಜನ್ಮ ನೀಡಿದ್ದಳು.

ಅದಾದ್ಮೇಲೆ ಆಕೆಯ ತೂಕ ನಿರಂತರವಾಗಿ ಹೆಚ್ಚಾಗಲಾರಂಭಿಸಿತ್ತು. ಈಗ ಲಿಸಾ 320 ಕೆಜಿ ತೂಕವಿದ್ದಾಳೆ. ಎದ್ದು ಓಡಾಡಲು ಕೂಡ ಅವಳಿಂದ ಸಾಧ್ಯವಾಗುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಲಿಸಾ ಹಾಸಿಗೆಯಲ್ಲಿ ಮಲಗೇ ಇರುತ್ತಿದ್ಲು.

ಹಾಗಾಗಿಯೇ ಅವಳ ಚರ್ಮದ ಮಡಿಕೆಗಳಲ್ಲಿ ಹುಳಗಳಾಗಿವೆ ಅಂತಾ ವೈದ್ಯರು ತಿಳಿಸಿದ್ದಾರೆ. ಲಿಸಾಳನ್ನು ಹಾಸಿಗೆಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲು ಸಾಕಷ್ಟು ಕಸರತ್ತು ಮಾಡಬೇಕಾಯ್ತು. ಆಕೆ ಭಾರೀ ತೂಕವಿದ್ದಿದ್ದರಿಂದ ಸಾಮಾನ್ಯ ಆಂಬ್ಯುಲೆನ್ಸ್ ನಲ್ಲಿ ಕೊಂಡೊಯ್ಯುವುದು ಸಾಧ್ಯವಿರಲಿಲ್ಲ.

ಹಾಗಾಗಿ ಅವಳಿಗೆಂದೇ ಪ್ರತ್ಯೇಕ ವಾಹನವನ್ನು ತರಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಲಿಸಾಗೆ ತೂಕ ಇಳಿಕೆಗಾಗಿ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. ಸರ್ಜರಿ ಬಳಿಕ ಆರೋಗ್ಯವಂತಳಾಗುವ ನಿರೀಕ್ಷೆ ಲಿಸಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...