alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲು ಕುಡಿಯದ ಮಗುವನ್ನು ಮನೆಯಿಂದ ಹೊರಹಾಕಿದ ಅಪ್ಪ, ಮುಂದೆ?

 

ಅಮೆರಿಕದ ಡಲ್ಲಾಸ್ ನಲ್ಲಿ 3 ವರ್ಷದ ಎನ್ ಆರ್ ಐ ಬಾಲಕಿಯೊಬ್ಳು ಕಾಣೆಯಾಗಿದ್ದಾಳೆ. ಮಗು ಹಾಲು ಕುಡಿಯಲಿಲ್ಲ ಅನ್ನೋ ಕಾರಣಕ್ಕೆ ಅವಳ ತಂದೆ ರಾತ್ರಿ ಅವಳನ್ನು ಮನೆಯಿಂದ ಹೊರಕ್ಕೆ ನಿಲ್ಲಿಸಿದ್ದ. ಇದೀಗ ಮಗುವಿನ ತಂದೆ 37 ವರ್ಷದ ವೆಸ್ಲಿ ಮ್ಯಾಥ್ಯೂಸ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಿನ ಜಾವ 3 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಪುಟ್ಟ ಬಾಲಕಿ ಶೆರಿನ್ ಹಾಲು ಕುಡಿಯೊಲ್ಲ ಅಂತಾ ಹಠ ಮಾಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ತಂದೆ ವೆಸ್ಲಿ ಅವಳನ್ನು ಮನೆಯಿಂದ ಹೊರಕ್ಕೆ ಹಾಕಿದ್ದ. ಪಕ್ಕದಲ್ಲೇ ಇದ್ದ ದೊಡ್ಡ ಮರದ ಕೆಳಗೆ ನಿಲ್ಲುವಂತೆ ಸೂಚಿಸಿದ್ದ.

15 ನಿಮಿಷಗಳ ನಂತರ ವೆಸ್ಲಿ ಹೊರಬಂದು ನೋಡಿದಾಗ ಶೆರಿನ್ ಅಲ್ಲಿ ಇರಲಿಲ್ಲ. 5 ಗಂಟೆಗಳ ನಂತರ ವೆಸ್ಲಿ ಮಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಶೆರಿನ್ ಹುಟ್ಟಿದ್ದು ಭಾರತದಲ್ಲಿ, ಅವಳನ್ನು ಮ್ಯಾಥ್ಯೂಸ್ ಕುಟುಂಬ ದತ್ತು ಪಡೆದಿತ್ತು. ಅಮೆರಿಕಕ್ಕೆ ಕರೆತರುವ ಮುನ್ನ ಶೆರಿನ್ ಅಪೌಷ್ಠಿಕತೆಯಿಂದ ಬಳಲುತ್ತಿದ್ಲು. ಹಾಗಾಗಿ ಅವಳಿಗೆ ವಿಶೇಷ ಡಯಟ್ ಫುಡ್ ನೀಡಲಾಗುತ್ತಿತ್ತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...