alex Certify
ಕನ್ನಡ ದುನಿಯಾ       Mobile App
       

Kannada Duniya

ನಿದ್ರೆಯಲ್ಲಿ ಸಾವನ್ನಪ್ಪಿತ್ತು ಮಗು: ಕಾರಣ ಕೇಳಿ ದಂಗಾದ ಪಾಲಕರು

ಅಮೆರಿಕಾದ ಶಾರ್ಟ್ಲ್ಯಾಂಡ್ ಕುಟುಂಬದ ಕಥೆ ಎಲ್ಲ ಪಾಲಕರಿಗೆ ಎಚ್ಚರಿಕೆ ಘಂಟೆ. 2016 ರಲ್ಲಿ ಜೋಷ್ ಹಾಗೂ ಜಾಸ್ಮಿನ್ ದಂಪತಿಯ ಮೂರು ವರ್ಷದ ಮಗ ಮಲಗಿದ್ದಾಗ ಸಾವನ್ನಪ್ಪಿದ್ದ. ಮೂರು ತಿಂಗಳ ನಂತ್ರ ಬಂದ ಸಾವಿನ ವರದಿ ವೈದ್ಯರನ್ನೊಂದೇ ಅಲ್ಲ ಇಡೀ ಕುಟುಂಬವನ್ನು ಆಘಾತಗೊಳಿಸಿತ್ತು.

3 ವರ್ಷದ ಬ್ರಿಯಾನ್ ಆಂಡ್ರ್ಯೂಗೆ ಚಿಕನ್ ಫಾಕ್ಸ್ ಆಗಿತ್ತು. ಕೆಲ ದಿನಗಳಲ್ಲಿಯೇ ಚಿಕನ್ ಫಾಕ್ಸ್ ಕಡಿಮೆಯಾಗಿತ್ತು. ಬ್ರಿಯಾನ್ ಎಂದಿನಂತೆ ಆಡಲು ಶುರು ಮಾಡಿದ್ದ. ಹಾಗಾಗಿ ಚಿಕ್ಕ ಮಗನಿಗೆ ಸೋಂಕು ತಾಗದಿರಲಿ ಎನ್ನುವ ಕಾರಣಕ್ಕೆ ದೊಡ್ಡ ಮಗ ಹಾಗೂ ಆಂಡ್ರ್ಯೂವನ್ನು ಅಜ್ಜಿ ಮನೆಗೆ ಕಳುಹಿಸಿದ್ದಳು ತಾಯಿ. ಆದ್ರೆ ಅದೇ ಮಗನನ್ನು ನೋಡೋದು ಕೊನೆ ಎಂಬುದು ಆಕೆಗೆ ಗೊತ್ತಿರಲಿಲ್ಲ.

ಅಜ್ಜಿಯ ಮನೆಯಲ್ಲಿ ರಾತ್ರಿ ಮಲಗಿದ್ದ ಆಂಡ್ರ್ಯೂ ಮತ್ತೆ ಏಳಲಿಲ್ಲ. ಬೆಳಿಗ್ಗೆ ಮಗ ಏಳಲಿಲ್ಲ ಎನ್ನುವ ಕಾರಣಕ್ಕೆ ವೈದ್ಯರನ್ನು ಕರೆಸಲಾಯ್ತು. ವೈದ್ಯರು ಮಗು ನಿದ್ರೆಯಲ್ಲೇ ಸಾವನ್ನಪ್ಪಿದೆ ಎಂದ್ರು. ಆಂಡ್ರ್ಯೂ ಸಾವಿಗೆ ಕಾರಣವೇನು ಎಂಬುದು ಆರಂಭದಲ್ಲಿ ಗೊತ್ತಾಗಲಿಲ್ಲ. ಸೂಕ್ತ ವರದಿ ಬಂದ ಮೇಲೆ ವೈದ್ಯರೇ ಕಂಗಾಲಾದ್ರು.

ಸಾಮಾನ್ಯ ಎಂದುಕೊಂಡಿದ್ದ ಚಿಕನ್ ಫಾಕ್ಸ್ ಆಂಡ್ರ್ಯೂ ಸಾವಿಗೆ ಕಾರಣವಾಗಿತ್ತು. Staphylococcus ಹೆಸರಿನ ಬ್ಯಾಕ್ಟೀರಿಯಾ ರಕ್ತವನ್ನು ವಿಷ ಮಾಡಿತ್ತು. ಚಿಕನ್ ಫಾಕ್ಸ್ ನಿಂದ ಚರ್ಮದ ಮೇಲೆ ಗುಳ್ಳೆಯೊಂದೇ ಆಗಿರಲಿಲ್ಲ, ಅದ್ರ ಬ್ಯಾಕ್ಟೀರಿಯಾ ರಕ್ತವನ್ನು ಸೇರಿತ್ತು. ಗುಳ್ಳೆಯನ್ನು ಆಂಡ್ರ್ಯೂ ತುರಿಸಿಕೊಂಡಿದ್ದ. ಇದೇ ಬ್ಯಾಕ್ಟೀರಿಯಾ ರಕ್ತಕ್ಕೆ ಸೇರಲು ಕಾರಣವಾಗಿತ್ತು. ಇದನ್ನು ಪಾಲಕರು ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಎಚ್ಚರಿಸುತ್ತಿದ್ದಾರೆ. ನಮಗಾದ ಕಷ್ಟ ಬೇರೆ ಯಾವ ಪಾಲಕರಿಗೂ ಬರಬಾರದು ಎಂಬುದು ಅವ್ರ ಆಶಯವಾಗಿದೆ. ವೈದ್ಯರು ಕೂಡ ಚಿಕನ್ ಫಾಕ್ಸ್ ಆದ ಮಕ್ಕಳನ್ನು ಜಾಗೃತೆಯಿಂದ ನೋಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...