alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನಲ್ಲಿ ಕೇವಲ ಮೂವರು ಮಾತ್ರ ಮಾತನಾಡ್ತಾರೆ ಈ ಭಾಷೆ…!

ಬದೇಶಿ ಅನ್ನೋದೊಂದು ಅಪರೂಪದ ಭಾಷೆ. ಇದನ್ನು ಜಗತ್ತಿನಲ್ಲಿ ಮಾತನಾಡುವವರು ಕೇವಲ ಮೂವರು ಮಾತ್ರ. ಉತ್ತರ ಪಾಕಿಸ್ತಾನದ ಮೂವರು ಈ ಭಾಷೆಯಲ್ಲಿ ಸಂಭಾಷಿಸುತ್ತಾರಂತೆ. ಬಿಶಿಗ್ರಾಮ ಎಂಬ ಕಣಿವೆ ಪ್ರದೇಶದಲ್ಲಿ ಮೂವರು ವೃದ್ಧರಿಗೆ ಈ ಭಾಷೆ ಗೊತ್ತು.

ಹಿಂದಿನ ಪೀಳಿಗೆಯಲ್ಲಿ ಈ ಗ್ರಾಮದ ನಿವಾಸಿಗಳೆಲ್ಲರೂ ಬದೇಶಿ ಭಾಷೆ ಬಳಸುತ್ತಿದ್ದರಂತೆ. ಆದ್ರೆ ಬೇರೆ ಗ್ರಾಮದ ಯುವತಿಯರನ್ನು ವಿವಾಹವಾಗಿ ಬಂದ ಮೇಲೆ ಆ ಭಾಷೆ ನಶಿಸಿ ಹೋಯ್ತು. ಯಾಕಂದ್ರೆ ಆ ಮಹಿಳೆಯರೆಲ್ಲ ತೋರ್ವಲಿ ಎಂಬ ಭಾಷೆಯನ್ನು ಮಾತನಾಡುತ್ತಿದ್ರು.

ಅವರ ಮಕ್ಕಳೆಲ್ಲ ಅದೇ ಭಾಷೆಯನ್ನು ರೂಢಿ ಮಾಡಿಕೊಂಡ್ರು. ಹಾಗಾಗಿ ಪುರಾತನ ಬದೇಶಿ ಭಾಷೆಯಲ್ಲಿ ಮಾತನಾಡುವವರೇ ಇಲ್ಲದಂತಾಯ್ತು. ಹಾಗಾಗಿ ಈ ಮೂವರಿಗೆ ಸಹ ಆ ಭಾಷೆಯೀಗ ಸ್ವಲ್ಪ ಸ್ವಲ್ಪ ಮರೆತು ಹೋದಂತಾಗಿದೆಯಂತೆ. 70 ವರ್ಷದ ರಹೀಂ ಗುಲ್ ತನಗೆ ಒಂದೆರಡು ಶಬ್ಧಗಳು ಮರೆತೇ ಹೋಗಿವೆ ಎನ್ನುತ್ತಾನೆ.

ಆತನ ಮಗ, ಮೊಮ್ಮಕ್ಕಳು ಎಲ್ಲರೂ ತೋರ್ವಲಿ ಭಾಷೆಯಲ್ಲೇ ಸಂಭಾಷಿಸುತ್ತಾರೆ. ಬದೇಶಿ ಭಾಷೆಯ ಉಳಿವಿಗೆ ಪಾಕಿಸ್ತಾನ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದೊಂದು ಕುಗ್ರಾಮವಾಗಿರೋದ್ರಿಂದ ಇಲ್ಲಿ ಶಿಕ್ಷಣ ಮತ್ತು ಉದ್ಯೋಗ ದೊರೆಯುತ್ತಿಲ್ಲ. ಹಾಗಾಗಿ ಸದ್ಯದಲ್ಲೇ ಈ ಭಾಷೆ ಇತಿಹಾಸದ ಪುಟ ಸೇರೋದು ಗ್ಯಾರಂಟಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...