alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಮಧ್ಯೆ ಕಿಕಿ ಡ್ಯಾನ್ಸ್ ಮಾಡುತ್ತಿದ್ದವರ ಅರೆಸ್ಟ್

ಯು.ಎ.ಇ. ರಸ್ತೆಗಳಲ್ಲಿ ಕಿಕಿ ಡ್ಯಾನ್ಸ್ ಮಾಡುತ್ತಿದ್ದ ಮೂವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಕೆನಡಾ ಹಿಪ್ ಹಾಪ್ ಸ್ಟಾರ್ ಡ್ರೇಕ್ ರ ಖ್ಯಾತ ಹಾಡು `ಇನ್ ಮೈ ಫಿಲಿಂಗ್’ ಗೆ ನೃತ್ಯ ಮಾಡುತ್ತಾ ಬೇರೆಯವರಿಗೆ ಸಾಮಾಜಿಕ ಜಾಲತಾಣದಲ್ಲಿ ಸವಾಲು ಎಸೆಯುವ ಈ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಬಂಧಿತರು ಯು.ಎ.ಇ. ರಸ್ತೆಗಳಲ್ಲಿ ಕಿಕಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಕಾರಿನ ಬಾಗಿಲನ್ನು ತೆರೆದು ಸ್ಟೆಪ್ಸ್ ಹಾಕುತ್ತಿದ್ದರು. ಪಕ್ಕದಲ್ಲಿ ಬರುತ್ತಿದ್ದ ಕಾರುಗಳನ್ನು ಲೆಕ್ಕಿಸದೆ, ಹೆಜ್ಜೆ ಹಾಕುತ್ತಿದ್ದರು. ಇದರಿಂದ ಅವರ ಜೀವಕ್ಕೂ ಅಪಾಯವಾಗುತ್ತಿತ್ತು. ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ.

ಬಂಧಿತರ ಹೆಸರುಗಳನ್ನು ಅಧಿಕಾರಿಗಳು ಬಹಿರಂಗಗೊಳಿಸಿಲ್ಲವಾದರೂ ಬಂಧಿತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...