alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವ ಆರೋಗ್ಯ ಸಂಸ್ಥೆಯಿಂದ ಆಘಾತಕಾರಿ ಮಾಹಿತಿ

who

ಪ್ರತಿನಿತ್ಯ ವಿಶ್ವದಲ್ಲಿ ತಡೆಗಟ್ಟಬಹುದಾದ ಕಾರಣಗಳಿಂದ್ಲೇ 3000 ಯುವಕ-ಯುವತಿಯರು ಪ್ರಾಣ ಕಳೆದುಕೊಳ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ಪ್ರತಿ 6 ಜನರಲ್ಲಿ ಒಬ್ಬರು, 10-19 ವರ್ಷ ವಯಸ್ಸಿನ 1.2 ಮಿಲಿಯನ್ ಮಂದಿ ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ.

ಈ ಸಾವಿಗೆ ಪ್ರಮುಖ ಕಾರಣ ಟ್ರಾಫಿಕ್ ಸಮಸ್ಯೆ, ಉಸಿರಾಟಕ್ಕೆ ಸಂಬಂಧಿಸಿದ ಸೋಂಕುಗಳು ಮತ್ತು ಆತ್ಮಹತ್ಯೆ. ಇದರಿಂದ ಕಳೆದ ವರ್ಷ 115,302 ಮಂದಿ ಮೃತಪಟ್ಟಿದ್ದಾರೆ. ಉತ್ತಮ ಆರೋಗ್ಯ ಸೇವೆ, ಶಿಕ್ಷಣ, ಸಾಮಾಜಿಕ ಬೆಂಬಲದ ಮೂಲಕ ಈ ಸಾವುಗಳನ್ನು ತಡೆಯಬಹುದಿತ್ತು.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಪೋಷಕಾಂಶಗಳ ಕೊರತೆಯಿರುವವರನ್ನು ಕೂಡ ಕಾಪಾಡಲು ಕ್ರಮ ಕೈಗೊಳ್ಳಬಹುದು. ಆಫ್ರಿಕಾದಂತಹ ಬಡ ರಾಷ್ಟ್ರಗಳಲ್ಲಿ ಏಡ್ಸ್, ಉಸಿರಾಟ ಸಂಬಂಧಿ ಖಾಯಿಲೆಗಳು, ಅತಿಸಾರದಂತಹ ರೋಗಗಳಿಗೆ ಸಾವಿರಾರು ಮಂದಿ ಬಲಿಯಾಗುತ್ತಿದ್ದಾರೆ.

ಕೊಳಕು ಇಂಧನಗಳಿಂದ ಅಡುಗೆ ಮಾಡುವ 10-14 ವರ್ಷದ ಬಾಲಕಿಯರು ನ್ಯುಮೋನಿಯಾದಂತಹ ಖಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. 15-19 ವರ್ಷದ ಹುಡುಗಿಯರಲ್ಲಿ ಗರ್ಭಧಾರಣೆ ಸಮಸ್ಯೆ, ರಕ್ತಸ್ರಾವ, ಸೆಪ್ಸಿಸ್, ಅಸುರಕ್ಷಿತ ಗರ್ಭಪಾತಗಳಿಂದ ಸಾವು ಸಂಭವಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...