alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಂಬ್ ನಿಷ್ಕ್ರಿಯ ದಳ ಸೇರಿದ ಮೊದಲ ಪಾಕ್ ಮಹಿಳೆ..

pak-women

ಉಗ್ರರ ದಾಳಿಯಿಂದ ನಲುಗಿರುವ ಪಾಕಿಸ್ತಾನದಲ್ಲಿ ಸೇನಾಪಡೆಗೆ ಈಗ ಮತ್ತಷ್ಟು ಬಲ ಬಂದಿದೆ. ಯಾಕಂದ್ರೆ ಮಹಿಳೆಯರು ಕೂಡ ದೇಶ ರಕ್ಷಣೆಗೆ ನಿಂತಿದ್ದಾರೆ. 29 ವರ್ಷದ ರಾಫಿಯಾ ಖಾಸಿಮ್ ಬೇಗ್ ಪಾಕಿಸ್ತಾನದ ಬಾಂಬ್ ನಿಷ್ಕ್ರಿಯ ದಳ ಸೇರಿದ ಮೊದಲ ಮಹಿಳೆ.

7 ವರ್ಷಗಳ ಹಿಂದೆ ಈಕೆ ಪೇದೆಯಾಗಿ ಪೊಲೀಸ್ ಇಲಾಖೆಯನ್ನು ಸೇರಿದ್ದರು.ಇದೀಗ 15 ದಿನಗಳ ತರಬೇತಿ ಮುಗಿಸಿ ಬಾಂಬ್ ನಿಷ್ಕ್ರಿಯ ದಳದಲ್ಲಿ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ. ಉಳಿದ 31 ಪುರುಷ ಸಿಬ್ಬಂದಿ ಜೊತೆಗೆ ರಾಫಿಯಾ, ನೌಶೆರಾದ ಸ್ಕೂಲ್ ಆಫ್ ಎಕ್ಸ್ ಪ್ಲೋಸಿವ್ ಹೋಲ್ಡಿಂಗ್ ನಲ್ಲಿ ಕೆಲಸ ಮಾಡಲಿದ್ದಾರೆ.

ಬಾಂಬ್ ನ ವಿಧಗಳು, ಅವುಗಳನ್ನು ಪತ್ತೆ ಮಾಡುವಿಕೆ ಹಾಗೂ ನಿಷ್ಕ್ರಿಯಗೊಳಿಸುವ ಬಗ್ಗೆ ರಾಫಿಯಾ ತರಬೇತಿ ಪಡೆದಿದ್ದಾಳೆ. ರಾಫಿಯಾ ಸುಶಿಕ್ಷಿತ ಕುಟುಂಬದಿಂದ ಬಂದವರು, 7 ವರ್ಷಗಳ ಹಿಂದೆ ಸೆಶನ್ಸ್ ಕೋರ್ಟ್ ಬಳಿ ನಡೆದ ಬಾಂಬ್ ದಾಳಿಯಿಂದಾಗಿ ರಾಫಿಯಾಗೆ ಪೊಲೀಸ್ ಇಲಾಖೆ ಸೇರಬೇಕೆಂದು ನಿರ್ಧರಿಸಿದ್ರು. ಇಂಟರ್ ನ್ಯಾಶನಲ್ ರಿಲೇಶನ್ಸ್ ವಿಷಯದಲ್ಲಿ ಮಾಸ್ಟರ್ಸ್ ಮುಗಿಸಿರುವ ರಾಫಿಯಾ, ಎಕನಾಮಿಕ್ಸ್ ಪದವೀಧರೆ. ಎಲ್ ಎಲ್ ಬಿ ಪದವಿ ಕೂಡ ಪಡೆದಿದ್ದಾರೆ. ಹಲವು ಕಂಪನಿಗಳಿಂದ ಅವರಿಗೆ ಉದ್ಯೋಗದ ಆಫರ್ ಬಂದಿತ್ತು, ಆದ್ರೆ ರಾಫಿಯಾ ಅದನ್ನೆಲ್ಲ ನಿರಾಕರಿಸಿ ಪೊಲೀಸ್ ಪಡೆ ಸೇರಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...