alex Certify
ಕನ್ನಡ ದುನಿಯಾ       Mobile App
       

Kannada Duniya

ಚರ್ಚ್ ನಲ್ಲಿ ಗುಂಡಿನ ದಾಳಿಗೆ 27 ಮಂದಿ ಸಾವು

ಎಸ್ಟರ್ ಲ್ಯಾಂಡ್ ಸ್ಟ್ರಿಂಗ್ಸ್(ಅಮೆರಿಕ): ಅಮೆರಿಕದ ಟೆಕ್ಸಾಸ್ ನ ವಿಲ್ಸನ್ ಕೌಂಟಿ ಫಸ್ಟ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ದಾಳಿಕೋರನೊಬ್ಬ ಮನಬಂದಂತೆ ಗುಂಡು ಹಾರಿಸಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ.

ಸ್ಯಾನ್ ಆಂಟೋನಿಯಾದಿಂದ ಆಗ್ನೇಯಕ್ಕೆ 50 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮೀಣ ಸಮುದಾಯದ ಸದರ್ ಲ್ಯಾಂಡ್ ಸ್ಟ್ರಿಂಗ್ಸ್ ನಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ 30 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಭಾನುವಾರ ರಾತ್ರಿ ಚರ್ಚ್ ನಲ್ಲಿ ಮಹಿಳೆಯರು, ಮಕ್ಕಳು ಸೇರಿ ಹೆಚ್ಚು ಜನ ಸೇರಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಡೆವಿನ್ ಪಿ. ಕೆಲ್ಲಿ ಎಂಬಾತ ಫೈರಿಂಗ್ ಮಾಡಿದ್ದಾನೆ.

ನೋಡ ನೋಡುತ್ತಲೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿ ದಾಳಿಕೋರನನ್ನು ಹೊಡೆದುರುಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಅಮೆರಿಕವನ್ನು ಉಗ್ರರು ಟಾರ್ಗೆಟ್ ಮಾಡಿಕೊಂಡಿದ್ದು, ಕಳೆದ 4 ದಿನಗಳಲ್ಲಿ ನಡೆದ 3 ನೇ ದಾಳಿ ಇದಾಗಿದೆ. ಟೆಕ್ಸಾಸ್ ಚರ್ಚ್ ನಲ್ಲಿ ಭಾನುವಾರ ರಾತ್ರಿ ನಡೆದ ದಾಳಿ ಭಯೋತ್ಪಾದಕರ ಕೃತ್ಯವೇ ಎಂಬುದು ಇನ್ನೂ ಖಚಿತವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...