alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನ್ಸಿನಾಟಿ ಬ್ಯಾಂಕ್ ಶೂಟೌಟ್‌ನಲ್ಲಿ ಭಾರತೀಯ ಸೇರಿ ಮೂವರು ಬಲಿ

ಅಮೆರಿಕದ ಸಿನ್ಸಿನಾಟಿಯ ಬ್ಯಾಂಕ್ ಕಟ್ಟಡವೊಂದಕ್ಕೆ ನುಗ್ಗಿದ ಬಂದೂಕುಧಾರಿ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ಮಳೆಗೆರೆದು ಆಂಧ್ರಪ್ರದೇಶ ಮೂಲದ ಪೃಥ್ವಿರಾಜ್ ಕಂಡೇಪಿ ಎಂಬ 25ರ ಹರೆಯದ ಯುವಕ ಹಾಗೂ ಮತ್ತಿಬ್ಬರನ್ನು ಹತ್ಯೆಗೈದಿದ್ದಾನೆ.

ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಹಂತಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುರುವಾರ ಈ ಘಟನೆ ನಡೆದಿದೆ. ಹಂತಕನನ್ನು 29 ವರ್ಷದ ಒಮರ್ ಎನ್ರಿಕ್ ಸಾಂತಾ ಪೆರೇಝ್ ಎಂದು ಗುರುತಿಸಲಾಗಿದೆ.

ಹಂತಕ ಒಮರ್ ಐದು ಮಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೃಥ್ವಿರಾಜ್ ಆಂಧ್ರದ ಗುಂಟೂರು ಜಿಲ್ಲೆಯವರಾಗಿದ್ದು, ಫಿಫ್ತ್ ಥರ್ಡ್ ಬ್ಯಾಂಕ್‌ನಲ್ಲಿ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ನ್ಯೂಯಾರ್ಕ್‌ನಲ್ಲಿನ ಭಾರತೀಯ ರಾಯಭಾರಿ ಸಂದೀಪ್ ಚಕ್ರವರ್ತಿ ಅವರು ಮಾತನಾಡಿ, ತಾವು ಸಿನ್ಸಿನಾಟಿ ಪೊಲೀಸರು ಹಾಗೂ ಪೃಥ್ವಿರಾಜ್ ಕುಟುಂಬಸ್ಥರ ಜತೆ ಸಂಪರ್ಕದಲ್ಲಿದ್ದು, ಮೃತದೇಹವನ್ನು ತವರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...