alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾದಲ್ಲಿ ಮಾಜಿ ಶಾಸಕರ ಮೊಮ್ಮಗನ ಹತ್ಯೆ

sankirthಆಂಧ್ರ ಪ್ರದೇಶದ ನರ್ಸಾಪುರ ಕ್ಷೇತ್ರದ ಮಾಜಿ ಶಾಸಕ ಗುಂಡಂ ವೀರಯ್ಯನವರ ಮೊಮ್ಮಗ 25 ವರ್ಷದ ಟೆಕ್ಕಿ ಸಂಕಿರ್ತನ್ ಎಂಬಾತನನ್ನು ಆತನ ರೂಂ ಮೇಟ್ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಮಾಡಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ.

ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂಕಿರ್ತನ್ ಹಾಗೂ ಆತನ ರೂಂ ಮೇಟ್ ಸಾಯಿ ಸಂದೀಪ್ ನಡುವೆ ಸೋಮವಾರ ಬೆಳಿಗ್ಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದ್ದು, ಈ ವೇಳೆ ಸಾಯಿ ಸಂದೀಪ್ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.

ಇವರಿಬ್ಬರ ಗಲಾಟೆ ಕೇಳಿ ಮತ್ತೊಂದು ರೂಮಿನಲ್ಲಿ ಮಲಗಿದ್ದ ಇವರುಗಳ ಸ್ನೇಹಿತ ಪ್ರಣೀತ್ ಧಾವಿಸಿ ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಕಿರ್ತನ್ ನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಟೆಕ್ಸಾಸ್ ಪೊಲೀಸರು, ಸಾಯಿ ಸಂದೀಪ್ ನನ್ನು ವಶಕ್ಕೆ ಪಡೆದು ಆತನ ವಿರುದ್ದ ಕೊಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...