alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರಾನ್ಸ್ ನಲ್ಲಿ ನಾಪತ್ತೆಯಾಗಿದ್ದಾರೆ ಭಾರತದ 22 ಮಂದಿ

ರಗ್ಬಿ ತರಬೇತಿಗೆಂದು ಭಾರತದಿಂದ ಫ್ರಾನ್ಸ್ ಗೆ ತೆರಳಿದ್ದ 22 ಮಂದಿ ಅಪ್ರಾಪ್ತರು ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ. ಅಪ್ರಾಪ್ತರು ಪಂಜಾಬ್, ಹರಿಯಾಣ ಹಾಗೂ ದೆಹಲಿ ಮೂಲದವರೆನ್ನಲಾಗಿದ್ದು, ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಕಳೆದ ವರ್ಷ ಮೂವರು ಟ್ರಾವೆಲ್ ಏಜೆಂಟ್ ಗಳು, ಪ್ಯಾರಿಸ್ ನಲ್ಲಿ ರಗ್ಬಿ ತರಬೇತಿ ಕೊಡಿಸುವುದಾಗಿ ಹೇಳಿ 13 ರಿಂದ 17 ವಯೋಮಿತಿಯ ಒಟ್ಟು 25 ಮಂದಿ ಅಪ್ರಾಪ್ತರ ಪೋಷಕರಿಂದ ತಲಾ 30 ಲಕ್ಷ ರೂ. ಹಣ ಪಡೆದು ಪ್ಯಾರಿಸ್ ಗೆ ಕರೆದುಕೊಂಡು ಹೋಗಿದ್ದರೆಂದು ಹೇಳಲಾಗಿದೆ.

ಅಲ್ಲಿ ತರಬೇತಿಗೂ ಇವರುಗಳು ಹಾಜರಾಗಿದ್ದು, ಈ ಪೈಕಿ ಇಬ್ಬರು ಅಪ್ರಾಪ್ತರು ಮರಳಿ ಬಂದಿದ್ದು, ಮತ್ತೊಬ್ಬ ಸೂಕ್ತ ದಾಖಲೆಗಳಿಲ್ಲದ ಕಾರಣ ಪ್ಯಾರಿಸ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದನೆನ್ನಲಾಗಿದೆ. ಪ್ಯಾರಿಸ್ ಪೊಲೀಸರು ಇಂಟರ್ ಪೋಲ್ ಗೆ ವಿಷಯ ಮುಟ್ಟಿಸಿದ್ದು, ಬಳಿಕ ಈ ಕುರಿತು ಭಾರತದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ಟ್ರಾವೆಲ್ ಏಜೆಂಟ್ ಗಳ ಕಛೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದೆ. ಅಲ್ಲದೇ ಅಪ್ರಾಪ್ತರ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆಯೇ ಎಂಬುದರ ಕುರಿತು ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...