alex Certify
ಕನ್ನಡ ದುನಿಯಾ       Mobile App
       

Kannada Duniya

2000 ಟನ್ ತೂಕದ ದೇವಾಲಯದ ಆವರಣ ಸ್ಥಳಾಂತರ

ಚೀನಾದ ಶಾಂಘೈನಲ್ಲಿ ಶತಮಾನಗಳಷ್ಟು ಹಳೆಯದಾದ ಬೌದ್ಧ ದೇವಾಲಯದ ಪ್ರತಿಮೆಗಳು ಮತ್ತು ಮುಖ್ಯ ಹಾಲ್ ಅನ್ನು ಸ್ಥಳಾಂತರ ಮಾಡಲಾಗಿದೆ. ಆ ಸ್ಥಳದಲ್ಲಿ ಆಗ್ತಿದ್ದ ಜನಸಂದಣಿಯನ್ನು ತಪ್ಪಿಸಲು ಸುಮಾರು 30 ಮೀಟರ್ ಗಳಷ್ಟು ಬದಿಗೆ ಸರಿಸಲಾಗಿದೆ.

ಜೇಡ್ ಬುದ್ಧ ದೇವಾಲಯಕ್ಕೆ ಪ್ರತಿನಿತ್ಯ 1 ಲಕ್ಷ ಜನರು ಭೇಟಿ ನೀಡ್ತಾರೆ. ಅತಿಯಾದ ಜನಸಂದಣಿಯಿಂದ ದೇವಾಲಯಕ್ಕೆ ಹಾನಿಯಾಗಬಹುದು ಅನ್ನೋ ಆತಂಕ ಅಧಿಕಾರಿಗಳಿಗಿತ್ತು. ಹಾಗಾಗಿ 2000 ಟನ್ ತೂಕದ ಮಹಾವೀರ ಹಾಲ್ ಅನ್ನು ವಿಶೇಷವಾಗಿ ತಯಾರಿಸಲಾದ ಹಳಿಗಳ ಮೂಲಕ ಸ್ಥಳಾಂತರ ಮಾಡಲಾಗಿದೆ.

ಸತತ ಎರಡು ವಾರಗಳ ಕಾರ್ಯಾಚರಣೆಯ ಬಳಿಕ ಇದು ಮುಕ್ತಾಯವಾಗಿದೆ. 1882ರಲ್ಲೇ ನಿರ್ಮಿಸಿದ್ದ ಈ ದೇವಾಲಯ ಬೇರೆ ಸ್ಥಳದಲ್ಲಿತ್ತು. 1918ರಲ್ಲಿ ಅದನ್ನು ಶಾಂಘೈಗೆ ಶಿಫ್ಟ್ ಮಾಡಲಾಗಿತ್ತು. ದೇವಾಲಯದ ಬುಡಕ್ಕೆ ಸಿಮೆಂಟ್ ಹಾಕಿ ಭದ್ರಪಡಿಸಿಕೊಂಡು ನಂತರ ಆವರಣವನ್ನು ಸ್ಥಳಾಂತರ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...