alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳರ ಪಾಲಾಗಿದೆ 20 ಟನ್ ಚಾಕಲೇಟ್

nutella-stockshot-650_650x400_71502964998

ಜರ್ಮನಿಯಲ್ಲಿ ಕಳ್ಳರು 37 ಲಕ್ಷ ಮೌಲ್ಯದ 20 ಟನ್ ಚಾಕಲೇಟ್ ಹೊತ್ತೊಯ್ದಿದ್ದಾರೆ. ಚಾಕಲೇಟ್-ಹೇಜಲ್ನಟ್ ಸ್ಪ್ರೆಡ್ ನ್ಯೂಟೆಲ್ಲಾ, ಚಾಕಲೇಟ್ ಎಗ್ಸ್ ಹಾಗೂ ಇತರ ಸ್ವೀಟ್ ಗಳು ಕಳ್ಳರ ಪಾಲಾಗಿವೆ. ಓಪನ್ ಟ್ರಕ್ ನಲ್ಲಿ ಇವುಗಳನ್ನು ಸಾಗಿಸಲಾಗುತ್ತಿತ್ತು.

ಹಾಗಾಗಿ ಸುಲಭವಾಗಿ ಕಳ್ಳರು ಕೈಚಳಕ ತೋರಿದ್ದಾರೆ. ಕದ್ದ ಮಾಲನ್ನು ದುಷ್ಕರ್ಮಿಗಳು ಬೇರೊಂದು ಟ್ರಕ್ ನಲ್ಲಿ ಲೋಡ್ ಮಾಡಿಕೊಂಡು ಹೋಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕಳ್ಳರನ್ನು ಪತ್ತೆ ಮಾಡೋದ್ಹೇಗೆ ಅನ್ನೋದೇ ಪೊಲೀಸರಿಗೆ ದೊಡ್ಡ ತಲೆನೋವು.

ಹಾಗಾಗಿ ಯಾರಾದ್ರೂ ಕೆಜಿಗಟ್ಟಲೆ ಚಾಕ್ಲೇಟ್ ಕೊಡ್ತೀವಿ ಅಂದ್ರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಂತಾ ಜರ್ಮನಿ ಪೊಲೀಸರು ಮನವಿ ಮಾಡಿದ್ದಾರೆ. ಕಳೆದ ವೀಕೆಂಡ್ ನಲ್ಲಿ ಇಂಥದ್ದೇ ಮತ್ತೊಂದು ಪ್ರಕರಣ ಕೂಡ ಜರ್ಮನಿಯಲ್ಲಿ ನಡೆದಿತ್ತು. 30 ಟನ್ ಹಣ್ಣಿನ ಜ್ಯೂಸ್ ಹೊತ್ತು ತರುತ್ತಿದ್ದ ಟ್ರಕ್ ಟ್ರೈಲರ್ ಅನ್ನೇ ಕಳ್ಳರು ಎಗರಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...