alex Certify
ಕನ್ನಡ ದುನಿಯಾ       Mobile App
       

Kannada Duniya

ನೀವೂ ತಿಳಿದುಕೊಳ್ಳಿ ಈ ದೇಶಗಳ ನಿಯಮ…!

ಜಗತ್ತಿನ ಬೇರೆ ಬೇರೆ ದೇಶದಲ್ಲಿ ಬೇರೆಯದೇ ಆದ ಕಾನೂನುಗಳಿರುತ್ತವೆ. ಪ್ರವಾಸಕ್ಕೆ ತೆರಳಬೇಕಾದರೆ ಪ್ರತಿಯೊಬ್ಬ ಪ್ರವಾಸಿಗನೂ ಅಲ್ಲಿನ ಕಾನೂನುಗಳ ಬಗ್ಗೆ ತಿಳಿದುಕೊಂಡಿದ್ದರೆ ಉತ್ತಮ. ಹಾಗಾದ್ರೆ ಯಾವ್ಯಾವ ದೇಶದಲ್ಲಿ ಗೊತ್ತಿಲ್ಲದ ಕಾನೂನುಗಳಿವೆ ಅನ್ನೋದನ್ನು ನೋಡೋಣ.

ಇಟಲಿಯಲ್ಲಿ ಗಂಡಸರು ಸ್ಕರ್ಟ್ ಧರಿಸಬಾರದು.

ಕ್ರೊಯಾಟಿಯಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗೊರಕೆ ನಿಶಿದ್ಧ.

ಫ್ರಾನ್ಸ್ ನಲ್ಲಿ ಟ್ರೈನ್ ಫ್ಲಾಟ್ ಫಾರಂ ಮೇಲೆ ಮುತ್ತಿಡಬಾರದು.

ಜರ್ಮನಿಯಲ್ಲಿ ಕಸವನ್ನು ನಿಗದಿತ ಸಮಯದಲ್ಲೇ ಮರುಬಳಕೆ ಮಾಡಬೇಕು.

ಸ್ವಿಡ್ಜರ್ ಲ್ಯಾಂಡ್ ನಲ್ಲಿ ಭಾನುವಾರ ವ್ಯಾಕ್ಯೂಮ್ ಮಾಡಬಾರದು.

ದಕ್ಷಿಣ ಆಸ್ಟ್ರೇಲಿಯಾದಲ್ಲಿ ಮದುವೆ ಅಥವಾ ಅಂತ್ಯಕ್ರಿಯೆಗೆ ತೊಂದರೆ ಕೊಡುವಂತಿಲ್ಲ.

ಗ್ರೀಸ್ ನಲ್ಲಿ ಐತಿಹಾಸಿಕ ಸ್ಥಳಗಳಲ್ಲಿ ಹೈಹೀಲ್ಸ್ ಧರಿಸುವಂತಿಲ್ಲ.

ಸಿಂಗಪೂರದಲ್ಲಿ ಚ್ಯೂಯಿಂಗಮ್ ಜಗಿಯಬಾರದು.

ಲಂಡನ್ ನಲ್ಲಿ ಹಿಮದ ಮೇಲೆ ಉದ್ದೇಶಪೂರ್ವಕವಾಗಿ ಜಾರುವಂತಿಲ್ಲ.

ಥೈಲ್ಯಾಂಡ್ ನಲ್ಲಿ ದುಡ್ಡಿನ ಮೇಲೆ ನಡೆಯುವಂತಿಲ್ಲ.

ಹೊಲ್ಯಾಂಡ್ ನಲ್ಲಿ ಬೆಳಕಿಲ್ಲದೆ ಬೈಕ್ ಓಡಿಸುವಂತಿಲ್ಲ.

ಮೆಕ್ಸಿಕೋದಲ್ಲಿ ಸೈಕಲ್ ಪೆಡಲ್ ಬಿಟ್ಟು ನಿಮ್ಮ ಪಾದಗಳು ಕೆಳಗಿಳಿಯುವಂತಿಲ್ಲ.

ಟೊರೆಂಟೋದಲ್ಲಿ ನೀವು ಮರ ಹತ್ತುವಂತಿಲ್ಲ.

ಫಿನ್ ಲ್ಯಾಂಡ್ ನಲ್ಲಿ ಹೆಡ್ ಲೈಟ್ ಇಲ್ಲದೆಯೇ ಗಾಡಿ ಓಡಿಸುವಂತಿಲ್ಲ.

ಜಮೈಕಾದಲ್ಲಿ ಸೇನೆಯ ಉಡುಪನ್ನು ಧರಿಸುವಂತಿಲ್ಲ.

ಸ್ಪೇನ್ ನಲ್ಲಿ ಚಪ್ಪಲಿ ಹಾಕಿ ಕಾರ್ ಡ್ರೈವ್ ಮಾಡುವಂತಿಲ್ಲ.

ಫ್ರಾನ್ಸ್ ನಲ್ಲಿ ಸಣ್ಣದಾದ ಶಾರ್ಟ್ಸ್ ಹಾಕುವಂತಿಲ್ಲ.

ಮಾಲ್ಡೀವ್ಸ್ ನಲ್ಲಿ ಆಲ್ಕೋಹಾಲ್ ಕೊಂಡೊಯ್ಯುವಂತಿಲ್ಲ.

ದುಬೈನಲ್ಲಿ ಸಾರ್ವಜನಿಕವಾಗಿ ಮುತ್ತಿಡುವಂತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...