alex Certify
ಕನ್ನಡ ದುನಿಯಾ       Mobile App
       

Kannada Duniya

ಯುಎಇಯಲ್ಲಿದ್ದಾರೆ ಶೇ.20 ರಷ್ಟು ಭಾರತೀಯರು

uae

ದೇಶ ಸುತ್ತು-ಕೋಶ ಓದು ಎನ್ನುವ ಮಾತೊಂದಿದೆ. ಆದ್ರೆ ದೇಶ ಸುತ್ತುವ ಬದಲು ಬೇರೆ ದೇಶಕ್ಕೆ ಹೋಗಿ ಅಲ್ಲೇ ನೆಲೆ ನಿಲ್ಲುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗ್ತಾ ಇದೆ. ಇದಕ್ಕೆ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ ವರದಿ ಪುಷ್ಠಿ ನೀಡುತ್ತಿದೆ.

2015ರ ವರದಿ ಪ್ರಕಾರ, ಯುಎಇ ಗೆ  ವಲಸೆ ಹೋಗುವವರಲ್ಲಿ ಭಾರತೀಯರು ಎರಡನೇ ಸ್ಥಾನದಲ್ಲಿದ್ದಾರೆ. ಯುಎಇ ಯಲ್ಲಿ ವಾಸವಾಗಿರುವವರಲ್ಲಿ ಶೇಕಡಾ 20ರಷ್ಟು ಮಂದಿ ಭಾರತೀಯರು ಎಂದು ವರದಿ ಹೇಳಿದೆ.

1995-2015 ರೊಳಗೆ ಭಾರತದಿಂದ ವಲಸೆ ಹೋದವರ ಸಂಖ್ಯೆ ಸುಮಾರು 28 ಲಕ್ಷ ಎಂದು ವರದಿಯಿಂದ ತಿಳಿದು ಬಂದಿದೆ. ವಿಶ್ವಮಟ್ಟದಲ್ಲಿ ನೋಡುವುದಾದ್ರೆ 2015ರಲ್ಲಿ 24.3 ಕೋಟಿ ಜನರು ತಮ್ಮ ದೇಶ ಬಿಟ್ಟು ಬೇರೆ ದೇಶದಲ್ಲಿ ವಾಸ ಶುರುಮಾಡಿದ್ದಾರೆ.

ವರದಿ ಪ್ರಕಾರ ಯುಎಇಯಲ್ಲಿ ವಾಸಿಸುತ್ತಿರುವ ಭಾರತೀಯರ ಸಂಖ್ಯೆ 2005-2010 ರೊಳಗೆ ಶೇಕಡಾ 126ರಷ್ಟು ಹೆಚ್ಚಳವಾಗಿದೆ. ಅಧಿಕ ಆದಾಯ ರಾಷ್ಟ್ರಗಳಿಗೆ ವಲಸೆ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಉತ್ತಮ ಕೆಲಸದ ಹುಡುಕಾಟದಲ್ಲಿ ಭಾರತೀಯರು ತಮ್ಮ ದೇಶ ಬಿಟ್ಟು ವಿದೇಶಗಳತ್ತ ಮುಖ ಮಾಡ್ತಿದ್ದಾರೆ.

 

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...