alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರದ ವಿರುದ್ಧ ಧ್ವನಿ ಎತ್ತಿದಾತನಿಗೆ 2 ವರ್ಷ ಜೈಲು

jm-3

ಭಾರತದ ಸರ್ಕಾರದ ಬಗ್ಗೆ ಜನ ಸಾಮಾನ್ಯ ಏನು ಬೇಕಾದ್ರೂ ಮಾತನಾಡಬಹುದು. ಆದ್ರೆ ಸೌದಿ ಅರೇಬಿಯಾದಲ್ಲಿ ಹಾಗಲ್ಲ. ಮಾನವಹಕ್ಕುಗಳ ಕಾರ್ಯಕರ್ತನೊಬ್ಬನಿಗೆ ಎರಡು ವರ್ಷ ಶಿಕ್ಷೆಯಾಗಿದೆ. ಟ್ವಿಟರ್ ನಲ್ಲಿ ಆತ ಸರ್ಕಾರದ ಬಗ್ಗೆ ಮಾತನಾಡಿದ್ದೇ ಇದಕ್ಕೆ ಕಾರಣವಾಗಿದೆ.

ಕಾರ್ಯಕರ್ತ ಟ್ವೀಟರ್ ಮೂಲಕ ಸರ್ಕಾರದ ವಿರುದ್ಧ ಜನರು ದಂಗೆ ಏಳುವಂತೆ ಸಜ್ಜುಗೊಳಿಸುತ್ತಿದ್ದ. ಹಾಗೆ ರಾಜಕೀಯ ಕೈದಿಗಳ ಬಿಡುಗಡೆಗೆ ಒತ್ತಾಯಿಸಿದ್ದ ಎನ್ನಲಾಗಿದೆ. ಇದ್ರ ವಿಚಾರಣೆ ನಡೆಸಿದ ಕೋರ್ಟ್ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಈ ಹಿಂದೆ ಕೂಡ ಸರ್ಕಾರದ ಬಗ್ಗೆ ಮಾತನಾಡಿದ ಅನೇಕ ರಾಜಕೀಯ ಮುಖಂಡರು ಕಂಬಿ ಎಣಿಸುತ್ತಿದ್ದಾರೆ.

ಮಾನವ ಹಕ್ಕುಗಳ ಕಾರ್ಯಕರ್ತನ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆತನ ಟ್ವೀಟರ್ ಅಕೌಂಟ್ ಬಂದ್ ಮಾಡಲಾಗಿದೆ. ಎರಡು ವರ್ಷ ಜೈಲು ಶಿಕ್ಷೆ ಮುಗಿಸಿ ಬಂದ ನಂತ್ರ ಮತ್ತೆರಡು ವರ್ಷ ಆತ ವಿದೇಶ ಪ್ರವಾಸಕ್ಕೆ ಹೋಗುವಂತಿಲ್ಲ. ಹಾಗೆ ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...