alex Certify
ಕನ್ನಡ ದುನಿಯಾ       Mobile App
       

Kannada Duniya

ಮಗ ಮಾಡಿದ ಕೆಲಸ ನೋಡಿ ಕಂಗಾಲಾದ ಯುವ ಜೋಡಿ

ಫುಟ್ಬಾಲ್ ಸೀಸನ್ ಟಿಕೆಟ್ ಖರೀದಿಸಬೇಕೆಂಬ ಮಹದಾಸೆಯಿಂದ ಯುವ ಜೋಡಿ ಕೂಡಿಟ್ಟಿದ್ದ 1 ಸಾವಿರ ಡಾಲರ್ ನೋಟು ಅವರದೇ ಎರಡು ವರ್ಷದ ಮಗುವಿನ ಕೈಗೆ ಸಿಕ್ಕು ಚೂರು ಚೂರಾಗಿದೆ.

ಅಮೆರಿಕಾದ ಉತಾಹ್ನ ಬೆನ್ ಮತ್ತು ಜಾಕೀ ಬೆನ್ಲಪ್ ಹಣ ಕಳೆದುಕೊಂಡು ಕಂಗಾಲಾದವರು. ಕಳೆದ ವಾರ 1060 ಡಾಲರ್ ನೋಟುಗಳಿದ್ದ ಎನ್ವಲಪ್ ಕಣ್ಮರೆಯಾಗಿತ್ತು. ಬಳಿಕ ಹರಿದ ಸ್ಥಿತಿಯಲ್ಲಿದ್ದ ನೋಟುಗಳು ಅವರ ಕಣ್ಣಿಗೆ ಬಿದ್ದಿದೆ.

ನೋಟಿನ ಸ್ಥಿತಿ ನೋಡಿದ ಆ ಜೋಡಿ ಕಕ್ಕಾಬಿಕ್ಕಿಯಾಗಿದ್ದಲ್ಲದೇ ಒಂದೈದು ನಿಮಿಷ ಮಾತೇ ಹೊರಟಿಲ್ಲ. ಬಳಿಕ ಸಾವರಿಸಿಕೊಂಡಿದೆ.

ಬಳಿಕ ಜಾಕೀ ತಮ್ಮ ಮಗ ಲಿಯೋ ಹಾಗೂ ಹರಿದ ನೋಟಿನ ಚೂರುಗಳ ಫೋಟೋವನ್ನು ಟ್ವೀಟ್ ಮಾಡಿ ವ್ಯಥೆಪಟ್ಟುಕೊಂಡಿದ್ದಾರೆ. ಅವರ ಟ್ವೀಟ್ ಗೆ ಅನೇಕ ರಸವತ್ತಾದ ಪ್ರತಿಕ್ರಿಯೆಗಳು ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...