alex Certify
ಕನ್ನಡ ದುನಿಯಾ       Mobile App
       

Kannada Duniya

4 ವರ್ಷದವನು ಹಾರಿಸಿದ ಗುಂಡಿಗೆ 2 ವರ್ಷದ ಮಗು ಬಲಿ

ನ್ಯೂಯಾರ್ಕ್‌: ಕ್ಯಾಲಿಫೋರ್ನಿಯಾದಲ್ಲಿ 4 ವರ್ಷದ ಮಗುವಿನ ಕೈಗೆ ಸಿಕ್ಕ ಪಿಸ್ತೂಲಿಗೆ, 2 ವರ್ಷದ ಮಗು ಬಲಿಯಾಗಿದೆ. ಸಜೀವ ಗುಂಡುಗಳಿದ್ದ ಪಿಸ್ತೂಲಿನಿಂದ ಅಚಾನಕ್‌ ಆಗಿ ಗುಂಡು ಹಾರಿದ್ದು, 2 ವರ್ಷದ ತಂಗಿಗೆ ತಗುಲಿದೆ.

ಈ ಸಂಬಂಧ ಮಗುವಿನ 53 ವರ್ಷದ ಅಜ್ಜ ಸೀಸರ್‌ ಲೊಪೇಸ್‌ ನನ್ನು ಪೊಲೀಸರು ಬಂಧಿಸಿದ್ದಾರೆ. ಸೀಸರ್‌ ಪಿಸ್ತೂಲನ್ನು ಮಕ್ಕಳ ಕೈಗೆಟುಕವ ಜಾಗದಲ್ಲಿ ಬಿಟ್ಟು ಹೋಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಬೆಳಗ್ಗೆ 9ರ ವೇಳೆಗೆ ಡಫ್ಫಿ ರಸ್ತೆಯಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಮಗುವಿನ ಎದೆ ಭಾಗಕ್ಕೆ ಗುಂಡು ಹೊಕ್ಕಿದ್ದು, ಆಸ್ಪತ್ರೆ ತಲುಪಿದ ಸುಮಾರು 1 ಗಂಟೆ ಬಳಿಕ ಮಗು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. 2018 ಆರಂಭದಿಂದ ಈವರೆಗೆ ಯುಎಸ್‌ನಲ್ಲಿ ಒಟ್ಟು 7,971 ಮಂದಿ ಗನ್‌ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ 381 ಮಂದಿ ಮಕ್ಕಳಾಗಿದ್ದಾರೆ ಎಂದು ಪೊಲೀಸ್‌ ದಾಖಲೆಗಳಿಂದ ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...