alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರಗ್ಸ್ ಕದಿಯಲು ಶವದ ಹೊಟ್ಟೆಗೇ ಹಾಕಿದ್ದಾರೆ ಕತ್ತರಿ

drugs

ತಾಂಜೇನಿಯಾದಲ್ಲಿ ಇಬ್ಬರು, ಶವದ ಹೊಟ್ಟೆಯನ್ನೇ ಕತ್ತರಿಸಿ ಅದರಲ್ಲಿದ್ದ ಡ್ರಗ್ಸ್ ಕಳವು ಮಾಡಿದ್ದಾರೆ. ಶವಾಗಾರದಲ್ಲಿ ಕೆಲಸ ಮಾಡ್ತಾ ಇದ್ದ ಇಬ್ಬರು ಈ ಕೃತ್ಯ ಎಸಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ದಂಧೆಕೋರರು ಮಾದಕ ವಸ್ತುಗಳನ್ನು ಸಾಗಿಸಲು ಮನುಷ್ಯನ ಹೊಟ್ಟೆಯಲ್ಲಿ ಅದನ್ನು ಅಡಗಿಸಿ ಇಡ್ತಾರೆ.

ಚಿಕ್ಕ ಚಿಕ್ಕ ಪ್ಯಾಕೆಟ್ ಗಳಲ್ಲಿ ಡ್ರಗ್ಸ್ ತುಂಬಿಸಿ ಅದನ್ನು ನುಂಗಿಸ್ತಾರೆ. ಅದೇ ರೀತಿ ಡ್ರಗ್ಸ್ ನುಂಗಿದ್ದ ವ್ಯಕ್ತಿಯೊಬ್ಬ ಹೋಟೆಲ್ ಕೋಣೆಯಲ್ಲಿ ಸತ್ತು ಬಿದ್ದಿದ್ದ. ಆತನ ದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆತನ ಹೊಟ್ಟೆಯಲ್ಲಿ ಡ್ರಗ್ಸ್ ಇರೋದು ಶವಾಗಾರದ ಸಿಬ್ಬಂದಿಗೆ ತಿಳಿದಿತ್ತು.

ಇಬ್ಬರೂ ಸೂಕ್ತ ಸಮಯ ನೋಡಿ ಶವದ ಹೊಟ್ಟೆಯನ್ನು ಕತ್ತರಿಸಿದ್ದಾರೆ. ಹೊಟ್ಟೆಯಲ್ಲಿದ್ದ ಡ್ರಗ್ಸ್ ಪ್ಯಾಕೆಟ್ ಗಳನ್ನು ತೆಗೆದುಕೊಂಡಿದ್ದಾರೆ. ಒಟ್ಟು 32 ಡ್ರಗ್ಸ್ ಮಾತ್ರೆಗಳನ್ನು ಉದ್ಯಮಿಯೊಬ್ಬನಿಗೆ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...