alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಮತಿಯಿಲ್ಲದೆ ಪಟಾಕಿ ಸಿಡಿಸಿ ‘ಸಂಕಷ್ಟ’ಕ್ಕೆ ಸಿಲುಕಿದ ಭಾರತೀಯರು

ದೀಪಾವಳಿ ಸಂಭ್ರಮದ ಭಾಗವಾಗಿ ಸಿಂಗಾಪುರದಲ್ಲಿ ಪಟಾಕಿ ಹಚ್ಚಿದ್ದಕ್ಕೆ ಭಾರತೀಯ ಮೂಲದ ಇಬ್ಬರನ್ನು ಸಿಂಗಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಸಿಂಗಾಪುರದಲ್ಲಿರುವ ಲಿಟಲ್ ಇಂಡಿಯಾ ಎನ್ನುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಿಂಗಾಪುರದಲ್ಲಿ ಯಾರೇ ಪಟಾಕಿ ಹೊಡೆಯಬೇಕೆಂದರೂ ಅಧಿಕಾರಿಗಳಿಂದ ಅನುಮತಿ‌ ಪಡೆಯಬೇಕು. ಆದರೆ ಭಾರತ ಮೂಲದ ಥಿಯ್ಯಾಗು ಸೆಲ್ವಾರಾಜು ಹಾಗೂ ಶಿವಕುಮಾರ್ ಸುಬ್ರಮಣ್ಯ ಅವರು ಅನುಮತಿ ಪಡೆಯದೇ ಗೌಸೆಸ್ಟರ್ ರಸ್ತೆಯಲ್ಲಿ ಪಟಾಕಿ ಹೊಡೆದಿರುವುದಕ್ಕೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಗುರುವಾರ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಶಿವಕುಮಾರ್ ಅವರು ಪಟಾಕಿ ಬಾಕ್ಸ್ ನ್ನು ರಸ್ತೆಯ ಡಿವೈಡರ್ ಮೇಲೆ ಇಟ್ಟಿದ್ದು, ಥಿಯ್ಯಾಗು ಅದಕ್ಕೆ ಕಿಡಿ ಹಚ್ಚಿದ್ದಾರೆ ಎಂದು ದಾಖಲೆ ನೀಡಲಾಗಿದೆ. ಆದರೆ ಈ ಇಬ್ಬರು ಪಟಾಕಿಯನ್ನು ಎಲ್ಲಿಂದ ತಂದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಬಹಿರಂಗಗೊಂಡಿಲ್ಲ.

ಆರೋಪಿಗಳು ಪಟಾಕಿ ಹೊಡೆದಿರುವ ವಿಡಿಯೊವನ್ನು ಫೇಸ್‌ ಬುಕ್‌ ಗ್ರೂಪ್ ಒಂದರಲ್ಲಿ ಹಾಕಲಾಗಿದ್ದು, ಅನುಮತಿ ಇಲ್ಲದೇ ಪಟಾಕಿ ಹೊಡದಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ಮಂಗಳವಾರ ರಾತ್ರಿ‌ ಇಬ್ಬರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಇದೀಗ ಈ ಇಬ್ಬರಿಗೂ ಎರಡು ವರ್ಷ ಜೈಲು ಅಥವಾ 2000-10000 ಸಿಂಗಾಪುರ ಡಾಲರ್ ಮೊತ್ತದ ದಂಡ ವಿಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...